ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ದಾಸಸಾಹಿತ್ಯ'

Rashmi Kasaragodu
Updated On : 31 Jan 2014, 1:46 am

ಮುಳಬಾಗಲು: ಕನ್ನಡ ಸಾಹಿತ್ಯವನ್ನು ದಾಸಸಾಹಿತ್ಯ ಶ್ರೀಮಂತಗೊಳಿಸುವುದರ ಮೂಲಕ ಶ್ರೀಸಾಮಾನ್ಯರು ಸರಳವಾಗಿ ದಾಸಸಾಹಿತ್ಯದ ತಿರುಳನ್ನು ಸವಿಯುವಂತೆ ಮಾಡಿತು ಎಂದು ಸಂತ ಭದ್ರಗಿರಿ ಸರ್ವೋತ್ತಮದಾಸರು ನುಡಿದರು.
ಪಟ್ಟಣದ ಹೊರವಲಯದ ವೀರಭದ್ರನಗರದ ಹರಿದಾಸ ಪೀಠದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯಪುರಂದರದಾಸರ ಆರಾಧನೋತ್ಸವನ್ನು ಉದ್ಫಾಟಿಸಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸಸಾಹಿತ್ಯ ಅಪಾರವಾದ ಕೊಡುಗೆ ನೀಡಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸಂತಸರ್ವೋತ್ತಮದಾಸರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರುನಿಂದ ಮುಳಬಾಗಲಿಗೆ ಸಂಗೀತ ಕಾರ್ಯಕ್ರಮ ನೀಡುವುದರೊಂದಿಗೆ ಸ್ಧಳೀಯ ಕಲಾವಿದರಿಗೂ ಹಾಡಲು ಸಮಾನ ಅವಕಾಶ ಕಲ್ಪಿಸಿದ ಪುರಂದರ ದಾಸರ ಆರಾಧನಾ ಸಮಿತಿಯನ್ನು ಶ್ಲಾಘಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಮಲ್ಲನಾಯಕನಹಳ್ಳಿ ಎಂ.ಎಸ್. ಕೋದಂಡರಾಮಯ್ಯ, ವೈಶ್ಯ ಸಮುದಾಯದ ವೈ.ಎಸ್. ಸುಬ್ಬಯ್ಯಶೆಟ್ಟಿ ಹಾಗೂ ಚಂದ್ರಶೇಖರಗುಪ್ತ ಅವರನ್ನು ಸನ್ಮಾನಿಸಲುಯಿತು.
ವಿದ್ವಾನ್ ಎಲ್. ಭೀಮಾಚಾರ್, ಸೂತ್ರ ನಾಗರಾಜಶಾಸ್ತ್ರೀ, ವಿದ್ವಾನ್ ಎಂ.ಎ. ಜಯರಾಮರಾವ್, ಬಿ.ಕೆ. ಚಂದ್ರಮೌಳಿ, ನಾ. ರಾಜರಾವ್ ಇದ್ದರು.
ಗುರುವಾರ ಮುಖ್ಯ ಆರಾಧನೆ: ಪುರಂದರದಾಸರ ಮುಖ್ಯ ಆರಾಧನೆ ಗುರುವಾರ ನಡೆಯಲಿದ್ದು, ಪುರಂದರ ವಿಠಲ ಮೂರ್ತಿಗೆ ಸಾಲಂಕೃತ ಅಲಂಕಾರ ಮಂಗಳವಾದ್ಯ, ತಿರುರವರಿಂದ ಗೋಷ್ಠಿಗಾಯನ ಉದ್ಫಾಟನೆ ನಡೆಯಲಿದೆ ಎಂದು ಪುರಂದರದಾಸರ ಆರಾಧನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ರಾಜರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement