ಬೈಕ್ ಬಿಟ್ಟು ಸೈಕಲ್ ಓಡಿಸಿ ಆರೋಗ್ಯವಂತರಾಗಿರಿ; ಮಕ್ಕಳಿಗೆ ಕಿವಿಮಾತು
ಕೆಜಿಎಫ್: ಮಕ್ಕಳು ಬೈಕ್ ಬಿಟ್ಟು ಸೈಕಲ್ಗಳನ್ನು ಓಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಕಾನೂನು ಪಾಲನೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬೈಕ್ಗಳನ್ನು ಕೊಡಿಸಬಾರದು ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಂ. ಮಮದಾಪುರ ಹೇಳಿದರು.
ನಗರಸಭೆ ಮೈದಾನದಲ್ಲಿ ಪೊಲೀಸರು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸಂಚಾರ ಸುರಕ್ಷತಾ ಬಗ್ಗೆ ಅರಿವು ಮೂಡಿಸುವ ಆಂದೋಲನದ ಮುಕ್ತಾಯ ಸಮಾಂರಂಭದಲ್ಲಿ ಮಾತನಾಡಿದ ಅವರು ಕಾನೂನು ಉಲ್ಲಂಘಿಸಿ ಬಾಲಾಪರಾಧಿಗಳ್ಳನ್ನಾಗಿ ಮಾಡು ಕೆಲಸ ಮಾಡಬಾರದು ಎಂದರು.
ಇದೇ ವೇಳೆ ಮಾತನಾಡಿದ ಎಸ್ಪಿ ಡಾ. ರೋಹಿಣಿಕಟೋಚ್ ಸೆಫಟ್ ಮಕ್ಕಳು ಸಂಚಾರ ನಿಯಮಗಳನ್ನು ಬಾಲ್ಯದಿಂದಲೇ ಅರಿಯಬೇಕು ಎಂದರು. ಈ ಸಂದರ್ಭದಲ್ಲಿ ಸಂಚಾರ ನಿಯಮಗಳ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿದರು.
ಶಾಲಾ ಮಕ್ಕಳಿಂದ ಘೋಷಣೆ ಸಹಿತ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಗರಸಭೆ ಆಯುಕ್ತ ಬಾಲಚಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಸುಬ್ರಮಣಿ, ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ, ಲಕ್ಷ್ಮೀನಾರಾಯಣ ಇದ್ದರು.