ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೈಕ್ ರ್ಯಾಲಿ

Rashmi Kasaragodu
Updated On : 31 Jan 2014, 1:37 am

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಗೊಂದಲ ಬಗೆಹರಿಸಿ ಸ್ಪಷ್ಟ ಭರವಸೆ ನೀಡಬೇಕೆಂದು ಒತ್ತಾಯಿಸಿ ಜ.31 ರಂದು ಕರೆ ನೀಡಿರುವ ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ನ್ನು ಯಶಸ್ವಿಗೊಳಿಸಬೇಕೆಂದು ಕೋರಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೈಕ್ ರ್ಯಾಲಿ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ರ್ಯಾಲಿ ಹೊರಟು ನೀರಾವರಿಗಾಗಿ ಆಗ್ರಹಿಸಿದ ಮುಖಂಡರು, ಜಿಲ್ಲೆಯ ಉಳಿವಿಗಾಗಿ ಆಯೋಜಿಸಿರುವ ಜಿಲ್ಲಾ ಬಂದ್ನಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಸ್ವಯಂ ಪ್ರೇರಣೆಯಿಂದ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೋರಾಟ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.



ಬಂದ್ ತಡೆಗೆ ತಾಲೂಕು ಆಡಳಿತ ಶತ ಪ್ರಯತ್ನ
ಗೌರಿಬಿದನೂರು: ಒಂದೆಡೆ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಜಿಲ್ಲಾ ಬಂದ್ ಬಿಸಿ ಒಂದೆಡೆ, ಕೋಟ್ಯಂತರ ರು.ಗಳ ವಿವಿಧ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆಗಾಗಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಆಗಮನದ ಸಂಭ್ರಮ ಮತ್ತೊಂದೆಡ. ಇವುಗಳ ದ್ವಂದ್ವದಲ್ಲಿ ತಾಲೂಕಿನ ಜನತೆ ಸಿಲುಕಿದ್ದಾರೆ.
ಬಂದ್ ಬೆಂಬಲಿಸುವಂತೆ ಮಾಜಿ ಶಾಸಕ ಎಸ್.ವಿ. ಅಶ್ವತ್ಥನಾರಾಯಣರೆಡ್ಡಿ, ಬಿಜೆಪಿ ಮುಖಂಡ ಸಿ.ಆರ್. ನರಸಿಂಹಮೂರ್ತಿ, ಗೋಪಿನಾಥ್, ಪರಿಸರವಾದಿ ಚೌಡಪ್ಪ, ಎಂ.ಆರ್. ಲಕ್ಷ್ಮೀನಾರಾಯಣ್,  ಲೋಕೇಶ್ ಗೌಡ, ಜೆಡಿಎಸ್ನ ಹೊಸೂರು ಹರಿ, ಮರಳೂರು ಗೋಪಾಲ್, ಎಬಿವಿಪಿ ಮುಖಂಡ ನವೀನ್, ಕರವೇ ಮುಖಂಡರು ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಮನವಿ ಮಾಡಿದರು.
ಈ ಮಧ್ಯೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ನೀರಿನ ಹೋರಾಟವನ್ನು ಮುಂದಿಟ್ಟುಕೊಳ್ಳಬಾರದು. ಬದಲಿಗೆ ಪಕ್ಷಾತೀತವಾಗಿ ಬಂದ್ಗೆ ಬೆಂಬಲಿಸಬೇಕು ಎಂದು ಪರಿಸರವಾದಿ ಚೌಡಪ್ಪ ಕೋರಿದ್ದಾರೆ. ಸರ್ಕಾರಕ್ಕೆ ಇಚ್ಚಾಶಕ್ತಿಇಲ್ಲದಿರುವುದರಿಂದ ಹಾಗೂ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ 65ವರ್ಷಗಳಿಂದಲೂ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯಾವುದೇ ನೀರಾವರಿ ಯೋಜನೆ ಜಾರಿಗೆ ತಂದಿಲ್ಲ. ಸಾವಿರಾರು ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ರೂಪಿಸಿವೆ ನಾವು ನೀರಿಗಾಗಿ ಯಾವುದೇ ರೀತಿಯ ಬೆಲೆ ತೆರಬೇಕಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement