ರೈತ ಸಂಜೀವಿನಿ ಚೆಕ್ ವಿತರಣೆ
ಮುಳಬಾಗಲು: ಸರ್ಕಾರ ನೀಡುವ ಸವಲತ್ತುಗಳನ್ನು ಅರ್ಥಿಕ ಚಟುವಟೆಕೆಗಳಿಗೆ ಬಳಸಿ ಮುಂದೆ ಬರಲು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲ್ಲಿ ಬುಧವಾರ ರೈತ ಸಂಜೀವಿನಿ ಯೋಜನೆಯಡಿ ತಾಲ್ಲೂಕಿನ ಬಾಳಸಂದ್ರ ಗ್ರಾಮದ ರವಣಮ್ಮ ಅವರಿಗೆ ಚೆಕ್ ವಿತರಿಸಿ ಮಾತನಾಡಿದರು. ರವಣಮ್ಮ ಅವರ ಪತಿ ಶಂಕರಪ್ಪ 22.11.2012ರಂದು ಹೊಲದಲ್ಲಿ ಕೃಷಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಮೃತರಾಗಿದ್ದರು. ಅವರ ಪತ್ನಿಗೆ ಐವತ್ತು ಸಾವಿರ ರುಪಾಯಿ ಸಹಾಯ ಧನದ ಚೆಕ್ ವಿತರಿಸಲಾಯಿತು. ಉಪಾಧ್ಯಕ್ಷ ಕುಮಾರಾಚಾರಿ, ಮಾಜಿ ಅಧ್ಯಕ್ಷ ಸತೀಶ್, ನಿರ್ದೇಶಕ ಬಿ. ಜಯರಾಮಗೌಡ, ಸೊಣ್ಣಿಗೌಡ, ವಕೀಲ ತಿಮ್ಮರಾಯಪ್ಪ, ಕಾರ್ಯದರ್ಶಿ ಎಂ. ಕೃಷ್ಣನ್ ಇದ್ದರು.