ಗೊಟ್ಟುಕುಂಟೆ ಶಾಲಾ ವಾರ್ಷಿಕೋತ್ಸವ
ಮುಳಬಾಗಲು: ತಾಲೂಕಿನ ಗೊಟ್ಟುಕುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಾಲೂಕಿನಲ್ಲಿ ಮಾದರಿ ಶಾಲೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಿಂತಲೂ ಉತ್ತಮ ರೀತಿಯಲ್ಲಿ ಶಾಲೆ ನಡೆಯುತ್ತಿದೆ, ಇಲ್ಲಿನ ಮಕ್ಕಳು ಕೋಲಾಟದಂತ ಗ್ರಾಮೀಣ ಜಾನಪದ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಎಮ್ಮೆನತ್ತ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಲ್.ನಾರಾಯಣಸ್ವಾಮಿ ತಮ್ಮ ಮಗಳು ಚೈತ್ರಾಂಜಲಿ ನೆನಪಿನಲ್ಲಿ ಶಾಲೆಯ ಎಲ್ಲಾ ಮಕ್ಕೆಳಿಗೂ ಬಹುಮತಿ ವಿತರಿಸಿದರು. ಗ್ರಾಪಂನ 13 ಗ್ರಾಮಗಳಲ್ಲಿ ಪ್ರತಿ ಶಾಲೆಯಲ್ಲಿ ಒಂದು ಮಗುವನ್ನು ತಾವು ತಮ್ಮ ಮಗಳ ನೆನಪಿನಲ್ಲಿ ದತ್ತು ಪಡೆದು ಶೈಕ್ಷಣೆಕ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.
ವಕೀಲ ನಾಗರಾಜ್ ಹಾಗೂ ಮಂಜುಳ ಶಾಲೆಗೆ ಐವತ್ತು ಸಾವಿರ ರುಪಾಯಿಗಳ ಮೈಕ್ ಸೆಟ್ ಹಾಗೂ ಯುಪಿಎಸ್ ಕೊಡುಗೆಯಾಗಿ ನೀಡಿದರು. ಕ್ಷೇತ್ರ ಸಂಯೋಜಕ ಮಂಜುನಾಥ್, ಶಿಕ್ಷಣ ಸಂಯೋಜಕ ರವೀಂದ್ರಬಾಬು, ಜಯಣ್ಣ, ಮುನಿಶಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಟರಾಜ್, ಚಂದ್ರಶೇಖರ್, ಜನಾರ್ಧನ್, ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವೆಂಕಟರವಣಪ್ಪ, ಮರಿಯಪ್ಪ, ಮುಖ್ಯ ಶಿಕ್ಷಕ ಕೆ.ಎನ್. ತಾಯಲೂರಪ್ಪ, ಸಹಶಿಕ್ಷಕಿ ಉಮಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.