ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೌರಿಬಿದನೂರಿನಲ್ಲಿ ಜ್ಯೋತಿರೆಡ್ಡಿ ಪಾದಯಾತ್ರೆ

Mainashree
Updated On : 31 Jan 2014, 10:46 am

ಗೌರಿಬಿದನೂರು; ಶಾಶ್ವತ ನೀರಾವರಿಗೆ ಆಗ್ರಹಿಸಿ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬಂದ್‌ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು, ಶಾಲಾಕಾಲಜುಗಳು, ಸಿನಿಮಾ ಮಂದಿರಗಳು ಸ್ಥಗತಗೊಂಡಿದ್ದವು.
ಜಾತ್ಯತೀತ ಜನತಾದಳದ ರಾಜ್ಯ ಘಟಕದ ಮಹಿಳಾಧ್ಯಕ್ಷೆ ಜ್ಯೋತಿರೆಡ್ಡಿ, ಜಿಲ್ಲಾ ರೈತಸಂಘದ ಪ್ರಧಾನಕಾರ್ಯದರ್ಶಿ ಎಂ.ಆರ್. ಲಕ್ಷ್ಮೀನಾರಾಯಣ್, ಪರಿಸರವಾದಿ ಚೌಡಪ್ಪ, ಹೊಸೂರು ಹರಿ, ಜೆಡಿಎಸ್ ಮುಖಂಡ ಪುರಸಭಾ ಸದಸ್ಯ ಅನಂತ್, ಮಹಿಳಾ ಚುನಾಯಿತ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ ರೇಣುಕಮ್ಮ ನೇತೃತ್ವದಲ್ಲಿ ಪಟ್ಟಣದಲ್ಲಿ ಪಾದಯಾತ್ರೆ ಮಾಡಿ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾತಿನ ಚಕಮುಕಿ: ಸ್ವಯಂಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಸ್ಥರ ಮನವೊಲಿಸಲು ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ, ರೈತಸಂಘದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರು ತೆರಳುತ್ತಿದ್ದಾಗ ಅಲ್ಲಿಗೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಗೋಪಿನಾಥ್ ತಕ್ಷಣ ನೀವು ತೆರಳದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದಾಗ ಸ್ವಲ್ಪ ಸಮಯ ಗೊಂದಲ ಉಂಟಾಗಿತ್ತು. ನಂತರ ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ, ಯಾರಿಗೂ ಒತ್ತಾಯಪಡಿಸುತ್ತಿಲ್ಲ ಮನವೊಲಿಸುತ್ತಿದ್ದೇವೆ, ಪ್ರತಿಭಟನೆಯನ್ನೂ ಮಾಡುತ್ತಿಲ್ಲ ಕೆಲವೇ ನಿಮಿಷಗಳಲ್ಲಿ ತೆರಳುತ್ತೇವೆ ಎಂದು ತಿಳಿಸಿದಾಗ ಎಸ್ಪಿ ಹೊರಟುಹೋದರು.
ಈ ಮಧ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತನೆ ಹಾಗೂ ಧೋರಣೆಯಿಂದ ಬೇಸರಗೊಂಡ ಜಿಡಿಎಸ್ ಕಾರ್ಯಕರ್ತರು ಹಾಗೂ ರೈತಸಂಘದವರು ಮಾಜಿ ಶಾಸಕ ಎನ್. ಜ್ಯೋತಿರೆಡ್ಡಿ ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಗಾಂಧಿವೃತ್ತದ ಬಳಿ ಬಂದ ಜ್ಯೋತಿರೆಡ್ಡಿ ಮೌನವಾಗಿ ಪಟ್ಟಣದಲ್ಲಿ ಪಾದಯಾತ್ರೆ ಮಾಡೋಣ ಪೊಲೀಸ್ ವರಿಷ್ಠಾಧಿಕಾರಿ ಬಂಧಿಸಲಿ ಎಂದು ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಬಂದಾಗ ನೂರಾರು ಜನರು ಜಮಾಯಿಸಿದರು, ನಂತರ ಮಾತನಾಡಿದ ಜ್ಯೋತಿರೆಡ್ಡಿ, ಎಸ್ಪಿ ಅವರ ಧೋರಣೆ ಉದ್ದಟತನದಿಂದ ಕೂಡಿದೆ. ನಾವು ಯಾವುದೇ ಕಾರ್ಯಕ್ರಮಕ್ಕೆ ತೊಂದರೆ ಮಾಡುತ್ತಿಲ್ಲ. ಮೌನವಾಗಿ ಬಂದ್ ಬೆಂಬಲಿಸುತ್ತಿದ್ದೇವೆ ಅವರು ತಾಕತ್ತಿದ್ದರೆ ಬಂಧಿಸಲಿ ಎಂದು ಸವಾಲೆಸೆದಾಗ ಕೆಲವು ಕಾಲ ಬಿಗುವಿನ ವಾತಾವಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಸಿಪಿಐ ನಾಗರಾಜ್ ಜ್ಯೋತಿರೆಡ್ಡಿ ಮತ್ತು ರೈತಹೋರಾಟಗಾರರ ಮನವೊಲಿಸಿ ಕಳುಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement