ದ.ರಾ. ಬೇಂದ್ರೆ ನಮನ ಕಾರ್ಯಕ್ರಮ
ಮಾಲೂರು: ಸಹಿಷ್ಣ ಗುಣವಿದ್ದ ದ.ರಾ. ಬೇಂದ್ರೆ ಅವರು ಕನ್ನಡ ಸಾಹಿತ್ಯ ಲೋಕವನ್ನು ವಿಷ್ಣುರೂಪಿಯಾಗಿ ಬೆಳಗಿದವರು ಎಂದು ಉಪನ್ಯಾಸಕ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದ.ರಾ. ಬೇಂದ್ರೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾತಿನ ಮಲ್ಲನಾಗಿದ್ದ ಬೇಂದ್ರೆ ಅವರು ಸೂಕ್ಷತೆ ಸ್ವಭಾವದವರು. ಅಕ್ಷರದೂಡನೆ ಆಟವಾಡುತ್ತ ಸಾಹಿತ್ಯ ರಚನೆ ಮಾಡಿ ಜೀವನದ ಕಷ್ಟಗಳ ನಡುವೆ ಹೇಗೆ ಬದುಕಬಹುದೆಂದು ತೋರಿಸಿಕೊಟ್ಟವರು ಎಂದರು.
ಚುಟುಕು ಸಾಹಿತ್ಯ ಪರಿಷತ್ ಅದ್ಯಕ್ಷ ಕುಂ. ಚಂದ್ರಪ್ಪಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.