ಅಂದ್ರಹಳ್ಳಿ ಕುಟೀರ ಆಶ್ರಮದಲ್ಲಿ ಕಳವು
ಕೋಲಾರ: ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಅಂದ್ರಹಳ್ಳಿಯಲ್ಲಿರುವ ಕುಟೀರ ಆಶ್ರಮದಲ್ಲಿ ಸೋಮವಾರ ಆಶ್ರಮದ ಕಾರ್ಯಕರ್ತೆ ಲಲಿತ ಎಂಬುವರಿಗೆ ಸೇರಿದ 7 ಸಾವಿರ ರು.ನಗದು ಕಳ್ಳತನವಾಗಿದೆ. ಲಲಿತ ಅವರು ಬೆಂಗಳೂರಿನಲ್ಲಿ ಕಾರ್ಯಕರ್ತೆಯರ ಸಭೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಯಾರೋ ಕಳ್ಳರು ಕೃತ್ಯವೆಸಗಿದ್ದಾರೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.