ಕಾನೂನು ಸಮಾಜದಲ್ಲಿ ಶಿಸ್ತು ಮೂಡಿಸುತ್ತದೆ
ಗೌರಿಬಿದನೂರು: ಕಾನೂನು ಸಮಾಜದಲ್ಲಿ ಶಿಸ್ತು ಮೂಡಿಸುತ್ತದೆ. ಹಾಗಾಗಿ ಸಮಾಜದ ಎಲ್ಲರೂ ಕಾನೂನು ಬಗ್ಗೆ ಅರಿವು ಹೊಂದಿರಬೇಕು ಎಂದು ಬೀದರ್ ಜಿಲ್ಲಾ ಹಿರಿಯ ಸಿವಿಲ್ನ್ಯಾಯಾಧೀಶ ಸಿ.ಆರ್. ರಾಜಾ ಸೋಮಶೇಖರ್ ತಿಳಿಸಿದರು.
ಇಲ್ಲಿನ ನ್ಯಾಷನಲ್ ಕಾಲೇಜಿನ ಬೆಳ್ಳಿ ಭವನದಲ್ಲಿ ನಡೆದ ಕಾನೂನು ಜಾಗೃತಿ ಮತ್ತು ದಂತ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಜನನದಿಂದ ಮರಣದ ತನಕ ಕಾನೂನು ಅವಶ್ಯಕತೆ ಇದ್ದೇ ಇರುತ್ತದೆ. ಆದ್ದರಿಂದ ಕಾನೂನು ಅರಿವು ಎಲ್ಲರೂ ಪಡೆಯಬೇಕು ಎಂದರು.
ವಿದ್ಯಾವಂತರಾದ ಐಟಿ, ಬಿಟಿ ಉದ್ಯೂಗಿಗಳಿಂದಲೇ ದಿನಕ್ಕೆ ಹತ್ತಾರು ವಿವಾಹ ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿರುವುದು ವಿಷಾಧನೀಯ, ಕಾನೂನಿಗೆ ಹೆಣ್ಣು ಗಂಡು ಎಂಬ ಭೇದ ಇಲ್ಲ, ಕಾನೂನು ಎಲ್ಲರಿಗೂ ಸಮಾನ ನ್ಯಾಯ ನೀಡುತ್ತದೆ ಎಂದರು.
ಹಿರಿಯ ದಂತ ವೈದ್ಯ ಡಾ. ರೂಪಾಚಂದ್ರಮಾಲ ದಂತ ರಕ್ಷಣೆ ಹಾಗೂ ಮುಂಜಾಗ್ರತೆ ಬಗ್ಗೆ ತಿಳಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ಸಂಪತ್ ಕುಮಾರಿ, ಉಪ ಪ್ರಾಂಶುಪಾಲ ಎಂ.ವಿ. ಕೃಷ್ಣಮೂರ್ತಿ, ವೆಂಕಟೇಶ್, ವೆಂಕಟರಮಣಪ್ಪ ಇದ್ದರು.