ನ್ಯಾಮನಗೌಡರಿಗೆ ಸನ್ಮಾನ
ತಿಪಟೂರು: ಪಟ್ಟಣದ ಗಾಂಧಿನಗರದ ಎಸ್ಆರ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಚಾಮುಂಡೇಶ್ವರಿ ಪತ್ತಿನ ಸೌಹಾರ್ದ ಸಂಘದ 10ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯಲ್ಲಿ ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ, ಸಂಘದ ಅಧ್ಯಕ್ಷೆ ವಿಶಾಲ ಸೋಮಶೇಖರ್, ಚೌಡೇಶ್ವರಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ದಿವಾಕರ್, ಜಿಪಂ ಸದಸ್ಯ ತ್ರಿಯಂಬಕ, ನಗರಸಭಾ ಅಧ್ಯಕ್ಷೆ ಗೀತಾ ದಿಲೀಪ್, ವಕೀಲರ ಸಂಘದ ತಾಲಾಕಾಧ್ಯಕ್ಷ ಎಸ್.ಜಯಣ್ಣ ಇದ್ದರು.