ಬೀಳ್ಕೊಡುಗೆ ಸಮಾರಂಭ
ಗೌರೀಬಿದನೂರು: ಪಟ್ಟಣದ ಪೊಲೀಸ್ ಪುರ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಶ್ರೀನಿವಾಸಯ್ಯ ಹಾಗೂ ವರ್ಗಾವಣೆಯಾದ ಲಕ್ಷ್ಮೀ ನಾರಾಯಣರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಸಬ್ಇನ್ಸ್ಪೆಕ್ಟರ್ ಬೈರ, ಪೊಲೀಸ್ ಹುದ್ದೆ ಜನರ ಸೇವೆ ಮಾಡಲು ಉತ್ತಮ ಅವಕಾಶ. ಇಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಕಡ್ಡಾಯ ಎಂದರು.