ಅಧಿಕಾರ ಸ್ವೀಕಾರ
ಪಾವಗಡ: ತಾಲೂಕಿನ ವಿವಿಧ ಇಲಾಖೆಗಳಿಗೆ ನೂತನ ಅಧಿಕಾರಿಗಳು ನಿಯೋಜಿತರಾಗಿದ್ದು, ತಹಸೀಲ್ದಾರ್ ಆಗಿ ತಿಮ್ಮಪ್ಪ ಬೋವಿ ಎಂಬುವರು ನಿಯೋಜನೆಗೊಂಡಿದ್ದಾರೆ. ಕಡೂರು ತಾಲೂಕಿನ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು ಪಾವಗಡ ತಾಲೂಕಿಗೆ ವರ್ಗಾವಣೆ ಆಗಿ ಬುಧವಾರ ಅಧಿಕಾರ ವಹಿಸಿಕೊಂಡರು. ತಾಲೂಕಿನ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಸುತ್ತಿದ್ದ ಕಿರಣ್ ಕುಮಾರ್ ಎಂಬುವರು ವರ್ಗಾವಣೆ ಆಗಿದ್ದು, ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುರಳೀಧರ್ ಎಂಬುವರು ವೈ.ಎನ್. ಹೊಸಕೋಟೆ ಠಾಣೆ ಪಿಎಸ್ಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ತಪಸ್ ಹೇಳಿಕೆಗೆ ಖಂಡನೆ
ತುಮಕೂರು: ಸಿಪಿಎಂ ಕಾರ್ಯಕರ್ತೆಯರ ಮೇಲೆ ಅತ್ಯಾಚಾರವೆಸಗುವಂತೆ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಸಂಸದ ತಪಸ್ ಪಾಲ್ ಹೇಳಿಕೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡಿಸಿದೆ. ಈ ಹೇಳಿಕೆ ಮಹಿಳಾ ವಿರೋಧಿ ಅಲ್ಲದೆ ನಾಗರಿಕತೆ ವಿರೋಧಿಯೂ ಆಗಿದೆ. ಎಂದು ಎಂ.ವಿ. ಕಲ್ಯಾಣಿ ಹೇಳಿದ್ದಾರೆ.