ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ: ದೂರು

Rashmi Kasaragodu
Updated On : 3 Jul 2014, 1:36 am

ಕೆಜಿಎಫ್: ರಾಜ್ಯ ಸಾರಿಗೆ ಬಸ್ ನಿರ್ವಾಹಕನಿಗೆ ಖಾಸಗಿ ಬಸ್ ನಿರ್ವಾಹಕ ಮತ್ತು ಸಿಬ್ಬಂದಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿಎಫ್‌ನಿಂದ ಆಂಧ್ರ ಪ್ರದೇಶದ ವಿ.ಕೋಟಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಎದುರಾಗಿ ಕಮ್ಮಸಂದ್ರದ ಆಕ್ಸ್‌ಫರ್ಡ್ ಶಾಲೆಯ ಬಳಿ ಎಸ್‌ವಿಎಂಎಸ್ ಖಾಸಗಿ ಬಸ್ಸು ಚಾಲಕ ಅಡ್ಡ ನಿಲಿಸಿದ್ದಾನೆ. ಇದನ್ನು ವಿರೋಧಿಸಿದ ಸರ್ಕಾರಿ ಬಸ್ಸಿನ ನಿರ್ವಾಹಕ ನಂಜುಂಡರೆಡ್ಡಿಯ ಮೇಲೆ ಖಾಸಗಿ ಬಸ್ಸು ನಿರ್ವಾಹಕ ಗೋವಿಂದರಾಜು ಮತ್ತು ಸಿಬ್ಬಂದಿ ಚಿನ್ನಣ್ಣ ಹಲ್ಲೆ ನಡೆದರೆಂದು ಆರೋಪಿಸಲಾಗಿದೆ. ಪ್ರಯಾಣ ಸಮಯ ನಿಗದಿ ಮಾಡಿರುವ ಪ್ರಕಾರ ತಮ್ಮ ವಾಹನ ತೆರಳಿದ ಬಳಿಕ ಸರ್ಕಾರಿ ಬಸ್ಸು ಹೋಗಬೇಕು. ಆದರೆ ನಿಗದಿತ ಸಮಯಕ್ಕಿಂತ ಮದಲೇ ಸರ್ಕಾರಿ ಬಸ್ಸು ಪ್ರಯಾಣ ಆರಂಭಿಸಿದ್ದೇ ಕಾಸಗಿ ಬಸ್ಸು ಸಿಬ್ಬಂದಿಕೆರಳಲು ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಂಜುಂಡರೆಡ್ಡಿ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೇದೆ ಆತ್ಮಹತ್ಯೆ ಯತ್ನ
ಚಿಂತಾಮಣಿ: ಪೋಲೀಸ್ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಪೋಲೀಸ್ ಪೇದೆಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಸಾವು-ಬದುಕಿನ ಜೊತೆ ಹೋರಾಡುತ್ತಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಶಿಡ್ಲಘಟ್ಟ ಪೋಲಿಸ್ ಠಾಣೆಯ ಪೇದೆ ಹರೀಶ್ ಆತ್ಮಹತ್ಯೆಗೆ ಯತ್ನಿಸಿ ಈಗ ಬೆಂಗಳೂರನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಹೊರವಲಯ ಕನಂಪಲ್ಲಿ ಕೆರೆಯ ಕಾವಡಿಗಾನಹಳ್ಳಿ ಬಳಿ ಕಳೆದ 2 ದಿನಗಳ ಹಿಂದೆ ದುಷ್ಕರ್ಮಿಗಳು ನಿಧಿ ಆಸೆಗಾಗಿ ಬಂಡೆಯೊಂದನ್ನು ಸ್ಫೋಟಿಸಿದ್ದರು. ಆಗ ಎಚ್ಚೆತ್ತ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಪೇದೆ ಹರೀಶ್ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಹೆದರಿದ ಪೇದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.  ಚಿಕಿತ್ಸೆ ಪಡೆಯುತ್ತಿರುವ ಪೇದೆಯ ವಿಚಾರಣೆ ನಡೆಸಲು ಪೋಲೀಸರು ಮುಂದಾಗಿದ್ದಾರೆ.
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ನಗರದ ಜೋಡಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ಫೈನಾನ್ಸ್‌ನ  ಶಂಕರ್ ಎಂಬುವರು ನಡೆದು ಬರುತ್ತಿರುವಾಗ ಅವರ ಮೇಲೆ ಮೆಕಾನಿಕ್ ವಸಂತ್ ಎಂಬಾತನು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement