ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಸಾಮಾನ್ಯರಿಗೆ ಸ್ಪಂದಿಸುವ ಕಂದಾಯ ಇಲಾಖೆ

Rashmi Kasaragodu
Updated On : 3 Jul 2014, 1:39 am

ಗೌರಿಬಿದನೂರು: ಕಂದಾಯ ಇಲಾಖೆ ಜನಸಾಮಾನ್ಯರಿಗೆ ಸ್ಪಂದಿಸುವ ಪ್ರಮುಖ ಇಲಾಖೆಯಾಗಿದ್ದು, ಜನತೆಗೆ ಲೋಪವಾಗದಂತೆ ಸಿಬ್ಬಂದಿ ನಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ತಿಳಿಸಿದರು.
ಪಟ್ಟಣದ ಡಾ.ಎಚ್.ಎನ್. ಕಲಾಭವನದಲ್ಲಿ ತಾಲೂಕು ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರೂ ಮಸೂದೆಗಳನ್ನು ಚೆನ್ನಾಗಿ ಓದಿ ಅರಿತುಕೊಂಡಾಗ ಜನತೆಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದರು. ಕಳೆದ ವರ್ಷ ಗೌರಿಬಿದನೂರು ತಾಲೂಕು ಕುಡುಮಲಕುಂಟೆ ಗ್ರಾಮದಲ್ಲಿ ಕೈಗಾರಿಕಾ ಪ್ರಾಂಗಣ ಆರಂಭಿಸುವಾಗ ಸುಮಾರು 120 ಎಕರೆ ಪ್ರದೇಶವನ್ನು ವಶಪಡಿಸಿಕೊಂಡು ಪರಿಹಾರ ವಿತರಿಸುವಾಗ ದಾಖಲೆಗಳನ್ನು ಹತ್ತಾರು ಬಾರಿ ಓದಿ ಅರಿತು ಸಮಸ್ಯೆ ಬಗೆಹರಿಸಿದೆ ಎಂದರು. ಭೂದಾಖಲೆಗಳ ಜಿಲ್ಲಾ ಉಪ ನಿರ್ದೇಶಕ ಅಜ್ಜಪ್ಪ ಮಾತನಾಡಿ, ಕಂದಾಯ ಇಲಾಖೆ ಬೇರೆಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆಯಾಗಿದ್ದು, ಅಕ್ಬರನ ಕಾಲದಲ್ಲಿ ಕಂದಾಯ ಇಲಾಖೆ ಪ್ರಾರಂಭವಾಯಿತು ಎಂದರು. ತಹಸೀಲ್ದಾರ್ ಡಾ. ಭಾಸ್ಕರ್ ಮಾತನಾಡಿ, ಜೂನ್ 30 ರಿಂದ ಜುಲೈ 1ರವರೆಗೆ ಕಂದಾಯ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು, ಇಲಾಖೆಗೆ ಒಳಪಟ್ಟಿದ್ದ ಅಬಕಾರಿ, ಭೂದಾಖಲೆ, ಖಜಾನೆ, ನೋಂದಣಿ ಇಲಾಖೆಗಳು ಬೇರ್ಪಟ್ಟರೂ ಕೆಲಸ ಕಡಿಮೆಯಾಗಿಲ್ಲ ಎಂದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಬಹುಮಾನ ವಿತರಿಸಿದರು. ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಲಾಯಿತು. ಬಿಇಒ ಬೈಯಪ್ಪರೆಡ್ಡಿ, ಸಿಪಿಐ ನಾಗರಾಜ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement