ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ-ಸಕ್ರಮದ ನಂತರ ಪೋಡಿ ಅದಾಲತ್ಗೆ ಆಗ್ರಹ

Rashmi Kasaragodu
Updated On : 4 Jul 2014, 2:06 am

ಕೋಲಾರ: ಜಿಲ್ಲೆಯಲ್ಲಿ ನೂರಾರು ರೈತರಿಗೆ ಭೂ ಸಾಗುವಳಿ ಚೀಟಿ ಇಲ್ಲದಿರುವುದರಿಂದ ಮೊದಲು ಭೂ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ನಂತರ ಪೋಡಿ ಅದಾಲತ್ ನಡೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ನಾಗನಾಳ ಮುನಿಯಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, 2004-05ನೇ ಸಾಲಿನಲ್ಲಿ ಭೂ ಅಕ್ರಮ ಸಕ್ರಮ ಸಮಿತಿಯಿಂದ ಸಾಗುವಳಿ ಚೀಟಿ ನೀಡಿರುವುದು ಬಿಟ್ಟರೆ ಕಳೆದ ಎರಡು ದಶಕಗಳಿಂದ ಭೂ ಸಕ್ರಮಾತಿ ಸಮಿತಿ ರಚನೆ ಮಾಡಿಲ್ಲ. ಇದರಿಂದ ಬಡವರಿಗೆ, ದಲಿತರಿಗೆ ಜಮೀನಿನ ಹಕ್ಕುದಾರರಾಗಲು ಆಗುತ್ತಿಲ್ಲವೆಂದು ತಿಳಿಸಿದ್ದಾರೆ.
ಪೋಡಿ ಅದಾಲತ್ ಉತ್ತಮ ಕಾರ್ಯಕ್ರಮ, ಆದರೆ, ಅಕ್ರಮ-ಸಕ್ರಮವಾಗದೆ ಪೋಡಿ ಅದಾಲತ್ ನಡೆಸಿದರೆ ಬಡವರಿಗೆ ಅನ್ಯಾಯವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement