ಅಪರಿಚಿತ ವ್ಯಕ್ತಿ ಶವ ಪತ್ತೆ
ಶಿಡ್ಲಘಟ್ಟ: ತಾಲೂಕಿನ ದಿಬ್ಬೂರಹಳ್ಳಿ ಠಾಣೆಯ ಹಿಂಭಾಗದಲ್ಲಿರುವ ಹಿರಿಯಚ್ಚೇನಹಳ್ಳಿ ಎಂಬ ಗ್ರಾಮದ ಬಳಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ತಂದು ಬಿಸಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮೃತನು ಬಿಳಿಬಣ್ಣದ ಚೆಕ್ಸ್ ಅಂಗಿಯನ್ನು ಧರಿಸಿದ್ದು, ಕಪ್ಪು ಪ್ಯಾಂಟನ್ನು ಧರಿಸಿದ್ದಾರೆ ಎಂದು ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತ ನಿರೀಕ್ಷಕ ಶ್ರೀನಿವಾಸ ಮೂರ್ತಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕಾಮಗಾರಿ ಶೀಘ್ರ ಮುಗಿಸಲು ಒತ್ತಾಯ
ಶಿಡ್ಲಘಟ್ಟ: ಮೋರಿ ಹಾಗೂ ರಸ್ತೆ ನಿರ್ಮಾಣ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡದ ಕಾರಣ ನಾಗರಿಕರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಮಂಜೂರಾಗಿರುವ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಮಾಡುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ತ್ವರಿತ ಗತಿಯಲ್ಲಿ ಸಾಗುತ್ತಿಲ್ಲ. ಒಟಿ ವೃತ್ತದಲ್ಲಿ ಮೋರಿ ನಿರ್ಮಾಣಕ್ಕೆ ರಸ್ತೆ ಅಗೆದು 15 ದಿನಗಳಾದರೂ ಕಾಮಗಾರಿ ಪೂರ್ಣಗೊಳಿಸದೆ ಸಂಚಾರಕ್ಕೆ ಆಡಚಣೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟ್ಟಣದ ಅಂಚೆ ಕಚೇರಿ ರಸ್ತೆ, ಗ್ರಂಥಾಲಯ ರಸ್ತೆಗಳನ್ನು ಕಿತ್ತು ಹಾಕಿರುವುದರಿಂದ ಓಡಾಟಕ್ಕೆ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಪದಾಧಿಕಾರಿಗಳ
ಆಯ್ಕೆ
ಶಿಡ್ಲಘಟ್ಟ: ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಶಿಡ್ಲಘಟ್ಟ ತಾಲೂಕು ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತಾಲೂಕು ಅಧ್ಯಕ್ಷರಾಗಿ ನಡಿಪಿನಾಯಕನಹಳ್ಳಿ ವೆಂಕಟೇಶ್, ಪ್ರಧಾನಕಾರ್ಯದರ್ಶಿಯಾಗಿ ಮೂರ್ತಿ, ಉಪಾಧ್ಯಕ್ಷರಾಗಿ ಮಳಮಾಚನಹಳ್ಳಿ ಮುನಿರಾಜು, ಕಾರ್ಯದರ್ಶಿಗಳಾಗಿ ತಲದುಮ್ಮನಹಳ್ಳಿ ಸೀತಪ್ಪ, ಮದ್ದೇಗಾರಹಳ್ಳಿ ಮಾರಪ್ಪ, ತಾತಹಳ್ಳಿ ಚಲಪತಿ, ಖಜಾಂಚಿ ದಿಬ್ಬೂರಹಳ್ಳಿ ನರಸಿಂಹಪ್ಪ, ಸದಸ್ಯರಾಗಿ ನಾರಾಯಣಸ್ವಾಮಿ ಗೊರಮಡಗು, ಗುರುಮೂರ್ತಿ ಬೈಯಪ್ಪನಹಳ್ಳಿ, ಎನ್.ಕೃಷ್ಣಮೂರ್ತಿ, ಡಿ.ಎಂ.ವೆಂಕಟೇಶ್, ಕೃಷ್ಣಪ್ಪ, ವಿ.ವೆಂಕಟೇಶ್, ದೇವರಮಳ್ಳೂರು ಕೃಷ್ಣಪ್ಪ, ರವಿಕುಮಾರ್ ಜೀವಿಕಾ, ಮಾರಪ್ಪ ತಲಕಾಯಲಬೆಟ್ಟ, ದಡಂಘಟ್ಟ ತಿರುಮಲೇಶ್, ಮುತ್ತೂರು ಲಕ್ಷ್ಮಣ, ಎ.ಡಿ.ಟಿ.ಎಸ್.ವೆಂಕಟೇಶ್, ನಾರಾಯಣಪ್ಪ ಬೈರಗಾನಹಳ್ಳಿ, ವೆಂಕಟೇಶ್, ಸುಬ್ರಮಣಿ, ಶ್ರೀನಿವಾಸ್, ಹುಜುಗೂರು ವೆಂಕಟೇಶ್, ಸಿ.ಎಂ.ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ.