ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂತಮ್ಮ ತಾಪಂಹಂಗಾಮಿ ಅಧ್ಯಕ್ಷೆ

Rashmi Kasaragodu
Updated On : 4 Jul 2014, 2:08 am

ಚಿಕ್ಕಬಳ್ಳಾಪುರ: ತಾಲೂಕು ಪಂಚಾಯ್ತಿ ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಮ್ಮ ಅವರನ್ನು ಆಯ್ಕೆ ಮಾಡಿದ್ದು, ಗುರುವಾರ ಅಧಿಕಾರ ಸ್ವೀಕರಿಸಿದರು. ತಾಪಂ ಅಧ್ಯಕ್ಷ ಮುಂದಿನ ಅವಧಿಗೆ ಈಗಾಗಲೇ ಮೀಸಲು ಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣೆಯನ್ನು ನಡೆಸಬೇಕಾಗಿದೆ. ಅಲ್ಲಿಯವರೆಗೂ ಕಾಂತಮ್ಮ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತಾಪಂ ಇಒ ಗಿರಿಜಾ ಶಂಕರ್, ಉಪಾಧ್ಯಕ್ಷೆ ಲಕ್ಷ್ಮಮ್ಮ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ತಾಪಂ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕಾರ್ಯನಿರ್ವಹಿಸುತ್ತಿದ್ದರು.
ಕ್ರೀಡಾಂಗಣದಲ್ಲಿ
ಚಿಣ್ಣರಿಗೂ ಆದ್ಯತೆ
ಗೌರಿಬಿದನೂರು: ಪಟ್ಟಣದ ದೈಹಿಕ ಶಿಕ್ಷಕರು ಪ್ರತಿ ಭಾನುವಾರ ನೇತಾಜಿ ಕ್ರೀಡಾಂಗಣದಲ್ಲಿ ಹಾಜರಾಗಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳ ತರಬೇತಿಯನ್ನು ಕಡ್ಡಾಯವಾಗಿ ನೀಡುವಂತೆ ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಹಿರೇಬಿದನೂರು ಕೆರೆಯಂಗಳದಲ್ಲಿನ ನೇತಾಜಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಆಟದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಟ್ಟಣದಲ್ಲಿ ವಾಸವಾಗಿರುವ ದೈಹಿಕ ಶಿಕ್ಷಕರು ಕನಿಷ್ಠ ವಾರಕ್ಕೆ ಒಂದು ಬಾರಿ ಕ್ರೀಡಾಂಗಣಕ್ಕೆ ಹಾಜರಾಗಿ ತಬೇತಿ ನೀಡಬೇಕು ಎಂದರು.
ಹಾಜರಾತಿ ಪುಸ್ತಕ: ಕ್ರೀಡಾಂಗಣದಲ್ಲಿ ಹಾಜರಾತಿ ಪುಸ್ತಕ ಹಾಗೂ ಸಾರ್ವಜನಿಕ ಸಲಹಾ ಪುಸ್ತಕಗಳನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು, ಇದರಿಂದ ಸಾರ್ವಜನಿಕರ ಅಭಿಪ್ರಾಯ ಅರಿತು ಕ್ರೀಡಾಂಗಣ ಅಭಿವೃದ್ಧಿಯ ಜೊತೆಗೆ ಸಮಸ್ಯೆ ಅರಿಯಲು ಸಹಕಾರಿಯಾಗಲಿದೆ ಎಂದು ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು. ಪುರಸಭೆ ಅಧ್ಯಕ್ಷ ಎಂ. ನರಸಿಂಹಮೂರ್ತಿ, ಉಪಾಧ್ಯಕ್ಷ ಚಿದಾನಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ, ಕ್ರೀಡಾಂಗಣದ ಮೇಲ್ವಿಚಾರಕ ಹಾಗೂ ದೈಹಿಕ ಶಿಕ್ಷಕ ಎನ್. ನಾರಾಯಣಸ್ವಾಮಿ, ಎಚ್.ಎನ್.ಪ್ರಕಾಶ್ರೆಡ್ಡಿ ಇದ್ದರು.
ಎಸ್ಐ ವಿರುದ್ಧ ತನಿಖೆ ನಡೆಸಿ ಕ್ರಮ: ಐಜಿಪಿ
ಮಾಲೂರು: ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ನಡೆದಿದ್ದ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ನಾಲ್ಪರನ್ನು ಬಂಧಿಸಲಾಗಿದೆ. ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳು ವಿಳಂಬ ಮಾಡಿದ್ದರೆ ಅವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐಜಿಪಿ ಉಲ್ಫತ್ ಹುಸೇನ್ ಹೇಳಿದರು.  ಮಾಲೂರಿಗೆ ಭೇಟಿ ನೀಡಿದ ಐಜಿಪಿ ಅವರು, ಪತ್ರಕರ್ತರೊಡನೆ ಮಾತನಾಡುತ್ತಾ, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಪ್ರಕರಣ ದಾಖಲಿಸಕೊಳ್ಳಲು ಮಾಸ್ತಿ ಎಸ್ಐ ನಿರ್ಲಕ್ಷ್ಯ ತೋರಿದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಮಾಲೂರಲ್ಲಿ ಸಂಚಾರಿ ಪೊಲೀಸ್ ಠಾಣೆ ತೆಗೆಯುವ ಬಗ್ಗೆ ಸರ್ಕಾರದೂಡನೆ ಮಾತುಕತೆ ನೆಡಲಾಗುವುದು ಎಂದು ಅವರು ಹೇಳಿದರು.  ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜೇಯ್ ಅಲೋರಿ, ಸಹಾಯಕ ಎಸ್ಪಿ ಜಮೀಲ್, ಡಿವೈಎಸ್ ಪಿ. ಆಶೋಕ್ ಇದ್ದರು.ನೋಂದಾಯಿಸಿಕೊಳ್ಳಬಹುದಾಗಿದೆ.
ಆಷಾಢ ಲಕ್ಷ್ಮಿ ಪೂಜೆ
ಗೌರಿಬಿದನೂರು: ಆಷಾಢ ಮಾಸದ ಪ್ರಯುಕ್ತ ಆಷಾಢ ಶ್ರೀಲಕ್ಷ್ಮೀಯ ಸಾಮೂಹಿಕ ಪೂಜೆಯನ್ನು ಮಂಗಳವಾರ ಸಂಜೆ ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಜನಾಂಗದ ಮಹಿಳೆಯರು ದೇವಾಲಯದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.


ಮೂಲ ಸೌಕರ್ಯಗಳಿಗೆ ಒತ್ತು

ಗೌರಿಬಿದನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹಿರೇಬಿದನೂರು ನೂತನ ಗ್ರಾಪಂ ಅಧ್ಯಕ್ಷೆ ಮಂಜುಳಶ್ರೀರಾಮರೆಡ್ಡಿ ಹೇಳಿದರು. ಸಮೀಪದ ಹಿರೇಬಿದನೂರು ಗ್ರಾಪಂ ನೂತನ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ನಂತರ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ ಎಂದರು. ಸಾರರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ನೂತನ ಚರಂಡಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಸದಸ್ಯರು ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸಹಕರಿಸುವಂತೆ ಮನವಿ ಮಾಡಿದರು.  ಹಿಂದಿನ ಗ್ರಾಪಂ ಅಧ್ಯಕ್ಷ ಅನುರಾಧನಾರಾಯಣರೆಡ್ಡಿ ವೈಯಕ್ತಿಕ ಕಾರಣಗಳಿಂದ ರಾಜಿನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಮಂಜುಳಶ್ರೀರಾಮರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿನರಸಮ್ಮನರಸಪ್ಪ, ಸದಸ್ಯರಾದ ಎಚ್.ಎ. ಉಗ್ರಪ್ಪ, ಸಿ.ಎನ್. ರಾಮಚಂದ್ರರೆಡ್ಡಿ, ವಿಜಯರಾಘವರೆಡ್ಡಿ, ಲಕ್ಷ್ಮಮ್ಮ ಇದ್ದರು.


ಮಕ್ಕಳಿಗೆ ನೋಟ್ಬುಕ್ ವಿತರಣೆ


ಟೇಕಲ್: ಟೇಕಲ್ನ ಬನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 12 ಶಾಲೆಗಳ ಸುಮಾರು 1200 ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿರುವುದಾಗಿ ಸಮಾಜ ಸೇವಕ ಮುಖಂಡ ಕ್ಷೇತ್ರೇನಹಳ್ಳಿಯ ಕ ಕೆ.ಎಸ್.ವೆಂಕಟೇಶ್ ತಿಳಿಸಿದರು. ಬನಹಳ್ಳಿ ಮತ್ತು ಗುಂಡ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ನೋಟ್ ಬುಕ್ ವಿತರಣೆ ಮಾಡಿ ಮಾತನಾಡುತ್ತಿದ್ದರು. ಇದೇ ವೇಳೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ. ಸಂಪಂಗಿ, ಮುಖಂಡ ಟೇಕಲ್ ಆಂಜಿನಪ್ಪ, ಎಪಿಎಂಸಿ ನಿರ್ದೇಶಕ ಚಾನ್ ಪಾಷ,  ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಶಶಿಧರ್, ಐ.ಎಂ. ನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ  ಕ್ಷೇತ್ರೇನಹಳ್ಳಿ ರಾಮಕೃಷ್ಣಪ್ಪ, ಯುವಮುಖಂಡ ಬಿ.ಜಿ.ಸತೀಶ್ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವಪ್ಪ, ಮಾಕಾರಹಳ್ಳಿ ಮಂಜುನಾಥ್, ಕಾಕಪ್ಪ ಹಾಗೂ ಬನಹಳ್ಳಿಯ ನಾಗರಾಜ್, ರಾಜಣ್ಣ, ವೆಂಕಟೇಶಪ್ಪ, ಮುನಿನಾರಾಯಣ್, ಶಾಲಾ ಶಿಕ್ಷಕರಾದ ಶಿವಶಂಕರ್, ರಾಜಣ್ಣ, ಕವಿತಾ, ಪದ್ಮಾ, ಶ್ರೀನಿವಾಸ್ ಮಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement