ಅಂಗಡಿಯಲ್ಲಿ ಕಳವು
ಕೋಲಾರ: ಅಂಗಡಿಯೊಂದರ ಬೀಗ ಒಡೆದು ಕಳ್ಳತನ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರ ಹೊರವಲಯದ ಆರ್.ವಿ. ಕಾಲೇಜಿನ ಮುಂಭಾಗ ಇರುವ ಶಿವ ಕಾಂಡಿಮೆಂಡ್ಸ್ನಲ್ಲಿ ಜು.3 ರ ಮಧ್ಯರಾತ್ರಿ ನಡೆದಿದೆ.
ಅಂಗಡಿ ಮಾಲೀಕ ರಾತ್ರಿ 9 ಗಂಟೆಗೆ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಪಕ್ಕದಲ್ಲೇ ಇದ್ದ ತಮ್ಮ ಮನೆಗೆ ತೆರಳಿದ್ದಾಗ ಕಳ್ಳರು ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ ಸುಮಾರು 5 ಸಾವಿರ ನಗದು ಹಾಗೂ 10 ಸಾವಿರ ಕರೆನ್ಸಿ ಕಾರ್ಡ್ಗಳನ್ನು ದೋಚಿದ್ದಾರೆ. ಅಂಗಡಿ ಮಾಲೀಕ ಶಿವಕುಮಾರ್ ಅವರು ಶುಕ್ರವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಅಂಗಡಿಯ ಬಾಗಿಲು ಸ್ವಲ್ಪ ಮಟ್ಟಿಗೆ ತೆಗೆದಿರುವುದನ್ನು ಗಮನಿಸಿದಾಗ ಕಳ್ಳತನ ಆಗಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.