ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮುಳಬಾಗಲು: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕುಪ್ಪುರು ಮತ್ತು ಬಂಗಾರಪೇಟೆ ಮೋತಕಪಲ್ಲಿ ಗ್ರಾಮದ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಆತ್ಯಾಚಾರವೆಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಸಮಿತಿ ಸದಸ್ಯರು ಪಟ್ಟಣದ ಮಿನಿವಿಧಾನಸೌಧ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಆರೋಪಿಗಳಾದ ಮಾಲೂರು ತಾಲೂಕು ಕುಪ್ಪುರು ಗ್ರಾಮದ ಮುನಿಕೃಷ್ಣ, ನಾರಾಯಣಸ್ವಾಮಿ, ಕೃಷ್ಣ, ಅನಿಲ್ ಕುಮಾರ್ಮ್‌ತ್ತು ಮೋತಕಪಲ್ಲಿ ಗ್ರಾಮದ ಪ್ರಕಾಶ್ ಹಾಗೂ ಸಂತೋಷ್ ಅವರನ್ನು ಬಂಧಿಸಲು ಒತ್ತಾಯಿಸಿ, ತಹಸೀಲ್ದಾರ್ ಕೆ. ಏಕೇಶಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು.