ಉದ್ಯೋಗ ಕಲ್ಪಿಸಲು ಮುಂದಾಗಿ: ನಾಗರಾಜ್ ಶೆಟ್ಟಿ
ಗೌರಿಬಿದನೂರು: ಸರ್ಕಾರ ಮತ್ತು ಸೇವಾ ಸಂಸ್ಥೆಗಳು ಮಹಿಳೆಯರಿಗೆ ಉಚಿತ ತರಬೇತಿ ನಂತರ ಉದ್ಯೋಗ ಕಲ್ಪಿಸಲು ಮುಂದಾಗಬೇಕೆಂದು ಜಿಲ್ಲಾ ನಗರಸಭೆ ಯೋಜನೆ ಅಧಿಕಾರಿ ನಾಗರಾಜ ಶೆಟ್ಟಿ ಅಭಿಪ್ರಾಯ ಪಟ್ಟರು. ಪುರಸಭೆ, ವೆಂಕಟೇಶ್ವರ ಐಟಿಐ ಸೆಂಟರ್ನಲ್ಲಿ ಹಮ್ಮಿಕೊಂಡಿದ್ದ ಎಸ್ಜೆಎಸ್ಆರ್ವೈ ಯೋಜನೆಯ ಸ್ಟೆಪ್ ಆಪ್ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಆರ್ಥಿಕವಾಗಿ ಸಭಲರಾಗಲು ಅನೇಕ ಯೋಜನೆಗಳು ರೂಪಿಸಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಪುರಸಭೆ ಅಧ್ಯಕ್ಷ ಎಂ. ನರಸಿಂಹ ಮೂರ್ತಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಸಲಹೆಯಿತ್ತರು. ಪುರ ಸಭಾ ಸದಸ್ಯ ಜಿ. ಬಾಲಾಜಿ, ಪುರ ಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿದರು. ಲೋಕೇಶ್, ವೆಂಕಟಾಚಲ, ಮಂಜುನಾಥ ಇದ್ದರು.