ಕಸಾಪ ಪೂರ್ವಭಾವಿ ಸಭೆ
ಗುಡಿಬಂಡೆ: ಪಟ್ಟಣದಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಕ.ಸಾ.ಪದಿಂದ ಪೂರ್ವಭಾವಿ ಸಭೆ ನಡೆಯಿತು. ಸಮ್ಮೇಳನ ನಡೆಸಲು ಅಗತ್ಯವಿರುವ ಸಿದ್ಧತೆಗಳ ಬಗ್ಗೆ ಹಾಗೂ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬಗ್ಗೆ ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಲೇಖಕ ಹಾಗೂ ಲಂಕೇಶ್ ಪ್ರಶಸ್ತಿ ವಿಜೇತ ಗುಡಿಬಂಡೆ ರಫೀಕ್ ಅವರನ್ನು ಅಧ್ಯಕ್ಷರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಆ.2ರಂದು ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನಿಸಿ ಈ ಸಂಬಂಧ ಶೀಘ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮವಾಗಿ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ ಘಟಕದ ಅಧ್ಯಕ್ಷ ಸ.ನ. ನಾಗೇಂದ್ರ, ರಿಯಾಜ್ ಪಾಷ, ಶ್ರೀ ರಾಮಪ್ಪ, ನಾರಾಯಣಸ್ವಾಮಿ, ಅಮೀರ್‌ಜಾನ್, ಬಿ. ಮಂಜುನಾಥ್ ಸೇರಿ ಅನೇಕರಿದ್ದರು.
ಶಿಕ್ಷಕರ ಸಂಘದ ಚುನಾವಣೆ
ಗೌರಿಬಿದನೂರು: ಪ್ರಥಮ ಬಾರಿಗೆ ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆ ಡೆಯಲಿದ್ದು, 10 ಸದಸ್ಯರ ಆಯ್ಕೆಗೆ ಅವಕಾಶವಿದೆ. 9 ರಿಂದ 14 ರ ಸಂಜೆ 5 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆಸಕ್ತರು ನಾಮಪತ್ರಗಳನ್ನು ನಿಗಧಿತ ಶುಲ್ಕ ನೀಡಿ ರಸೀದಿ ಪಡೆದು ಸಲ್ಲಿಸಬಹುದು. ಚುನಾವಣಾ ಪ್ರಕ್ರಿಯೆ ಬಿಆರ್‌ಸಿ ಕೇಂದ್ರ ಕೋಟೆ ಶಾಲೆ ಆವರಣದಲ್ಲಿ ನಡೆಯಲಿದೆ. ಸಿ.ಎನ್. ಕೃಷ್ಣಪ್ಪರಿಗೆ ನಾಮಪತ್ರ ಸಲ್ಲಿಸಬಹುದು.
ಶಾಲಾಭಿವೃದ್ಧಿ ಸಮಿತಿ ರಚನೆ
ಗುಡಿಬಂಡೆ: ಪಟ್ಟಣದ ಸ. ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆಯಲ್ಲಿ ಶಾಲೆಗೆ ನೂತನ ಶಾಲಾಭಿವೃದ್ಧಿ ಸಮಿತಿ ರಚಿಸಲಾಯಿತು. ಪೋಷಕ ಏಜಾಜ್‌ರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರನ್ನಾಗಿ ಎಚ್.ಎಸ್. ಶಿಲ್ಪರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಸಭೆ ಈ ಕೆಳಕಂಡವರನ್ನು ಸದಸ್ಯರನ್ನಾಗಿ ನೇಮಿಸಿತು. ಸದಸ್ಯರು ಹುಸನಪ್ಪ, ಮಂಜುಳಾಬಾಯಿ, ನಾಗರಾಜ, ಲಕ್ಷ್ಮೀದೇವಮ್ಮ, ಮುಬೀನತಾಜ್, ಮಮ್ತಾಜ್, ನಾಗರೆಡ್ಡಿ, ಭಾಸ್ಕರ, ಸುಜಾತ, ಸುಮಿತ್ರ, ಜ್ಯೋತಿಲಕ್ಷಮ್ಮ, ನಾಮನಿರ್ದೇಶಿತ ಸದಸ್ಯರು: ಚಂದ್ರಶೇಖರ ನಾಯ್ಡು, ಲಕ್ಷ್ಮೀಕಾಂತಮ್ಮ, ಮಂಗಳ, ವಸಂತಮ್ಮ, (ಆರೋಗ್ಯ ಕಾರ್ಯಕರ್ತೆ) ಶಬರೀಷ ಮತ್ತು ಸುನಿಲ್(ವಿದ್ಯಾರ್ಥಿಗಳು).