ಕ್ಷೀರೋದ್ಯಮದಿಂದ ಆರ್ಥಿಕ ಬಲ: ನಂಜೇಗೌಡ
ಟೇಕಲ್: ಮಾಲೂರು ತಾಲೂಕಿನಲ್ಲಿ ಅತೀ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಗಳು ಹೊಂದಿರುವುದು ಟೇಕಲ್‌ನ ಕೊಂಡಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 8 ಸಹಕಾರ ಸಂಘಗಳು ಇವೆ. ಕ್ಷೀರೋದ್ಯಮದಿಂದ ಆರ್ಥಿಕವಾಗಿ ಸ್ವಾವಲಂಬನೆ ಹೊಂದಬಹುದು ಎಂದು ಮಾಲೂರು ಕೋಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ತಿಳಿಸಿದರು.
ಕೊಂಡಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿ ಉತ್ತಮ ರೀತಿಯಿಂದ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನೀಡುತ್ತಿದ್ದು ಕೆಂಪನಹಳ್ಳಿ, ಪನಮಾಕನಹಳ್ಳಿ, ಅಗರ ಗ್ರಾಮಗಳಿಗೆ ನೂತನ ಡೈರಿ ನೀಡುವ ಬಗ್ಗೆ ಒಕ್ಕೂಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ತಾಲೂಕು ಸಂಯೋಜಕ ವಿಶ್ವನಾಥ್, ಮುಖಂಡ ಕೆ.ಬಿ.ನಾರಾಯಣಸ್ವಾಮಿ ಮುಂತಾದವರು ಮಾತನಾಡಿದರು. ವಿಸ್ತರಣಾಧಿಕಾರಿಗಳಾದ ವೇಣು, ಶ್ರೀಧರ್ ಮೂರ್ತಿ, ಶ್ರೀನಿವಾಸ್, ಕೊಂಡಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಎನ್.ವೆಂಕಟೇಶ್ ಗೌಡ, ಕಾರ್ಯದರ್ಶಿ ಕೆ.ವಿ. ರಾಮಮೂರ್ತಿ, ಕಾರ್ಯದರ್ಶಿಗಳಾದ ಕೆಂಪಣ್ಣ, ಸೀನಪ್ಪ, ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.