ಡಿಸಿ ಕಚೇರಿ ಆವರಣದಲ್ಲಿ ಅನಗತ್ಯ ಪೊಲೀಸ್ ಚೌಕಿ
ಕೋಲಾರ: ಜಿಲ್ಲಾ ಪೊಲೀಸ್ ಇಲಾಖೆಯು ನಗರದಲ್ಲಿ ಅಗತ್ಯವಿರುವ ಕಡೆ ಪೊಲೀಸ್ ಚೌಕಿಗಳನ್ನು ಇಡುವ ಬದಲು ಬೇಡವಾದ ಜಾಗದಲ್ಲಿ ದೃಷ್ಟಿ ಗೊಂಬೆಯಂತೆ ಅಳವಡಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ಐದಾರು ವರ್ಷಗಳಲ್ಲಿ ನಗರದ ವಿವಿಧ ಕಡೆ ಅಳವಡಿಸಲಾಗಿದ್ದ ಪೊಲೀಸ್ ಚೌಕಿಗಳು ನಾಪತ್ತೆಯಾಗಿದ್ದರೆ, ಕೆಲವು ಕಡೆ ಮುರಿದು ಮೂಲೆ ಸೇರಿದೆ. ಕೋಲಾರ ನಗರದ ಬಸ್ನಿಲ್ದಾಣ, ಮೆಕ್ಕೆ ವೃತ್ತ, ಕ್ಲಾಕ್ ಟವರ್ ಇನ್ನಿತರ ಕಡೆ ಇಡಲಾಗಿದ್ದ ಪೊಲೀಸ್ ಚೌಕಿಯನ್ನು ರಸ್ತೆಗಳ ದುರಸ್ತಿ ಹಾಗೂ ಸೂಕ್ತ ಸ್ಥಳದಲ್ಲಿ ಇಡಲಾಗಿಲ್ಲವೆಂಬ ಕಾರಣದಿಂದ ತೆರವು ಮಾಡಿಸಲಾಗಿದೆ. ನಿಜ ಹೇಳಬೇಕಾದರೆ ಕೋಲಾರ ನಗರದ ಶ್ರೀನಿವಾಸಪುರ-ಚಿಂತಾಮಣಿ, ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ವೃತ್ತದಲ್ಲಿ ಪೊಲೀಸ್ ಚೌಕಿಯ ಅಗತ್ಯವಿದೆ. ಕೋರ್ಟ್ ಸರ್ಕಲ್, ಡೂಮ್ಲೆಲೈಟ್ ಸರ್ಕಲ್, ಟೇಕಲಲ್ರಸ್ತೆ, ಮೆಕ್ಕೆ ವೃತ್ತದಲ್ಲಿ ಪೊಲೀಸ್ಚೆಕಿಗಳು ಬೇಕಾಗಿದೆ. ಆದರೆ, ಸಂಚಾರಿ ಪೊಲೀಸರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪೊಲೀಸ್ ಚೌಕಿ ಇಡಲು ಕಾರಣವೇನೆಂಬುದು ಜನರನ್ನು ಕಾಡ ತೋಡಗಿದೆ. ಕೋರ್ಟ್ ವೃತ್ತದಲ್ಲಿ ವಾಹನಗಳ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಸ್ತೆ ಉಬ್ಬುಗಳನ್ನು ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದ ಪ್ರತಿನಿತ್ಯ ಕನಿಷ್ಠ ಒಂದಾದರೂ ರಸ್ತೆ ಅಪಘಾತಕ್ಕೆ ಎಡೆಯಾಗಿದೆ. ಸಂಚಾರಿ ಪೊಲೀಸರು ಡಿಸಿ ಕಚೇರಿ ಆವರಣದಲ್ಲಿ ಪೊಲೀಸ್ ಚೌಕಿ ಇಡಲು ತೋರಿದ ಆಸಕ್ತಿಯನ್ನು ಅಗತ್ಯವಿರುವ ಕಡೆಗಳಲ್ಲೂ ಅಳವಡಿಸಲಿ ಎಂಬುದು ಸಾರ್ವಜನಿಕರು ಒತ್ತಾಸೆಯಾಗಿದೆ.