ನೋಟ್ ಪುಸ್ತಕ ವಿತರಣೆ
ಗೌರಿಬಿದನೂರು: ಬೆಂಗಳೂರಿನ ರೋಟರಿ ಕ್ಲಬ್ ಸ್ಸೌತ್ ಜೋನ್ ಮತ್ತು ಎನ್ಎಂಎಸ್ ಕುಟುಂಬ ದ ಸಹಕಾರದೊಂದಿಗೆ ಗೋಟಕನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಗ್ರಾಪಂ ಸದಸ್ಯ ಬಿ.ಎನ್. ನಾಗರಾಜ್ ಮಾತನಾಡಿ, ಉಳ್ಳವರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿ ಸಮಾಜ ಸೇವೆ ಮಾಡಬೇಕು ಎಂದರು. ಗ್ರಾಪಂ ಅಧ್ಯಕ್ಷ ನಂಜಪ್ಪ, ದೇವರಾಜ್, ರಾಮು ಇದ್ದರು.