ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಲಕನ ಅಪಹರಿಸಿ ಕಾಂಪೌಂಡ್‌ನಲ್ಲಿ ಎಸೆದರು!

Rashmi Kasaragodu
Updated On : 5 Jul 2014, 12:52 pm

ಕೆಜಿಎಫ್: ನಾಲ್ಕು ವರ್ಷದ ಬಾಲಕನನ್ನು ದುಷ್ಕರ್ಮಿಯೊಬ್ಬ ಶಾಲೆಯಿಂದ ಅಪಹರಿಸಿ ಕೈ ಕಾಲುಗಳನ್ನು ಕಟ್ಟಿ ಹಾಕಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಡಾವಣೆಯೊದರ ಕಾಂಪೌಂಡ್‌ನಲ್ಲಿ ಬಿಟ್ಟು ಹೋಗಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉರಿಗಾಂನ ಫೈವ್ಲೈಟ್ಸ್ ಸರ್ಕಲ್ ಮುಂಭಾಗದ ನಿವಾಸಿ ಕಾಮರಾಜ್ ಮತ್ತು ಕೋಮತಿ ದಂಪತಿ ಪುತ್ರ ಭಾವನ್‌ಕುಮಾರ್(4) ಮನೆಯ ಸಮೀಪದಲ್ಲೇ ಇರುವ ಸೆಕ್ರೇಡ್ ಹಾರ್ಟ್ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತಂದೆ ಕಾಮರಾಜ್ ಬೆಮೆಲ್ ಕಾರ್ಖಾನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಾಯಿ ಕೋಮತಿ ಸ್ಥಳಿಯ ಪಪೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ತಾಯಿ ಕೋಮತಿ ಮಗನನ್ನು ಬೆಳಗ್ಗೆ 9.30ಕ್ಕೆ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರು.
ಬೆಲ್ ಹೊಡೆದು ಪ್ರಾರ್ಥನೆಯಾದ ಬಳಿಕ ಮಗುವನ್ನು ಅಪರಿಚಿತ ವ್ಯಕ್ತಿ ಅಪಹರಿಸಿ ಮಗುವಿನ ಬಾಯಿ, ಕೈ, ಕಾಲು ಕಟ್ಟಿ ಚೀಲದಲ್ಲಿ ಹಾಕಿಕೊಂಡು ನಗರದ ಸರ್ಕಾರಿ ಕಾಲೇಜಿನ ಹಿಂಭಾಗದಲ್ಲಿರುವ ಡಾ.ರೆಡ್ಡಿ ಬಿಲ್ಡಿಂಗ್‌ನ ಪರಂದಾಮನ್ ಎಂಬವರ ಮನೆಯ ಕಾಂಪೌಂಡ್‌ನಲ್ಲಿ ಬಿಟ್ಟು ಹೋಗಿದ್ದಾನೆ. ಸಮಯಕ್ಕೆ ಸರಿಯಾಗಿ ಅದೇ ಬಡಾವಣೆಯ ನಿವಾಸಿ ರಾಬೀನ್‌ಸನ್ ಮಗುವಿನ ಉರಿಸಾಟದ ಶಬ್ದ ಕೇಳಿ ಪ್ಲಾಸ್ಟಿಕ್ ಚೀಲ ಬಿಚ್ಚಿ ನೋಡಿದಾಗ ಅದರಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ರಕ್ಷಿಸಿದ್ದಾನೆ. ಬಳಿಕ ಸ್ಥಳೀಯರು ಸೇರಿ ಪೋಷಕರಿಗೆ ಒಪ್ಪಿದ್ದಾರೆ.
ಬೆಮೆಲ್ ಕಾರ್ಮಿಕನ ಕೃತ್ಯ?: ಸ್ಥಳೀಯರು ಮಗುವನ್ನು ರಕ್ಷಿಸುತ್ತಿದ್ದಂತೆ ಅಲ್ಲಿಗೆ ಬೆಮೆಲ್ ಕಾರ್ಖಾನೆಯ ಸಮವಸ್ತ್ರ ಧರಿಸಿದ ಒಬ್ಬ ವ್ಯಕ್ತಿ ಬಂದು ಮಗುವನ್ನು ಕಂಡು ಈ ಬಾಲಕ ನನಗೆ ಪರಿಚಯಸ್ಥರ ಮಗ. ಆತನನ್ನು ನಾನು ಅವರ ಪೋಷಕರಿಗೆ ಒಪ್ಪಿಸುತ್ತೇನೆ ಎಂದು ಹೇಳಿ ಮಗುವನ್ನು ಪಡೆಯಲು ಮುಂದಾದಾಗ ಆತನ ಮೇಲೆ ಅನುಮಾನಗೊಂಡ ಸ್ಥಳೀಯರು ಮಗುವನ್ನು ಅವರ ಹೆತ್ತವರು ಹಾಗೂ ಪೊಲೀಸರು ಬಂದ ಮೇಲೆ ಅವರಿಗೆ ಒಪ್ಪಿಸುತ್ತೇವೆ ಎಂದಿದ್ದಾರೆ. ಆಗ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಮಗುವನ್ನು ನೀಡುವಂತೆ ಕೇಳಿದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement