ಶಾಲಾ ಕೊಠಡಿಯಲ್ಲಿ ಹುತ್ತ: ಭೀತಿಯಲ್ಲಿ ವಿದ್ಯಾರ್ಥಿಗಳು
ಶಿಡ್ಲಘಟ್ಟ: ತಾಲೂಕಿನ ಲಕ್ಕಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಶಾಲಾ ಕೊಠಡಿಯಲ್ಲಿ ಬೆಳೆಯುತ್ತಿರುವ ಹುತ್ತದಿಂದಾಗಿ ಭೀತಿಯಿಂದಲೇ ಪಾಠ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಸುತ್ತಲು ಗಿಡಗಳು ಬೆಳೆದಿರುವುದರಿಂದ ಮತ್ತು ಕೊಠಡಿಯೊಳಗೆ ಹುತ್ತ ಬೆಳೆದಿರುವುದರಿಂದ ಹಾವು ಬರುವ ಭೀತಿಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಇದೇ ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರ ಇದ್ದು ಸಣ್ಣ ಮಕ್ಕಳಿಗೂ ಭಯ ಆವರಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಕ್ಕಳ ತೊಂದರೆ ನಿವಾರಣೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.