ಶಿಕ್ಷಣಕ್ಕೆ ದಾನಮಾಡಿ: ತ್ಯಾಗೀಶಾನಂದಜೀ
ಗೌರಿಬಿದನೂರು: ಮಕ್ಕಳ ವಿದ್ಯಾರ್ಜನೆಗಾಗಿ ಸಹಾಯ ಮಾಡುವುದೇ ನಿಜವಾದ ಪೂಜೆ ಎಂದು ಬೆಂಗಳೂರು ರಾಮಕೃಷ್ಣ ಮಠದ ತ್ಯಾಗೀ ಶಾನಂದ ಮಹರಾಜ್ ಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಅಲಕಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ರಾಜ್ಯದಲ್ಲಿ ಪ್ರಕೃತಿ ವೈಫಲ್ಯದಿಂದಾಗಿ ಸಮಯಕ್ಕೆ ಸರಿಯಾಗಿ ಮಳೆ ಬರುತ್ತಿಲ್ಲ. ಮಕ್ಕಳಿಗೆ ನೋಟ್ ಪುಸ್ತಕ ಖರೀದಿಸುವುದು ಸಮಸ್ಯೆ ಆಗಿದೆ. ಆದ್ದರಿಂದ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು ಎಂದರು. ಪ್ರಬಾರಿ ಮುಖ್ಯ ಶಿಕ್ಷಕ ಮುಕುಂದಯ್ಯ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಿಪಡಿಸಿದರು. ಇದೇ ಸಂದರ್ಭದಲ್ಲಿ ಅಲಕಾಪುರ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ತಾಲೂಕು ವಿವೇಕಾನಂದ ಶಕ್ತಿ ಸಂಚಲನ ಕೇಂದ್ರದ ಮುಖ್ಯಸ್ಥ ಭರತ್ ರಾಜ್ ಮಾತನಾಡಿದರು. ಮುಕುಂದಯ್ಯ, ಕೆ. ಸಂಪತ್ ರಾಮ್ ಸೇರಿ ಅನೇಕರಿದ್ದರು.