ಶುಲ್ಕ ವಾಪಸಿಗೆ ಒತ್ತಾಯ
ಕೋಲಾರ: ಇತ್ತೀಚೆಗೆಷ್ಟೇ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಅನುಮತಿ ಪಡೆಯದೆ ಪ್ರಾರಂಭಿಸಲಾಗಿದ್ದ ಬಾಲ್ಡಿವಿನ್ ಶಾಲೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಚ್ಚಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಈ ಶಾಲೆಗೆ ಈಗಾಗಲೇ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳಿಗೆ ಪಾವತಿಸಿರುವ ಶುಲ್ಕವನ್ನು ಬಾಲ್ಡಿವಿನ್ ಶಾಲೆಯ ಆಡಳಿತ ಮಂಡಳಿಯಿಂದ ವಾಪಸ್ಸು ಕೊಡಿಸಬೇಕೆಂದು ಪೋಷಕರಾದ ರಮೇಶ್, ಇಕ್ಬಾಲ್ ಅಹ್ಮದ್ ಮತ್ತು ಕೃಷ್ಣಪ್ಪ ಮತ್ತಿತರರು ಒತ್ತಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.