ಸ್ವಚ್ಛತೆಗೆ ಪುರಸಭೆಯಿಂದ ಕ್ರಮ
ಕೋಲಾರ/ಶ್ರೀನಿವಾಸಪುರ: ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ಚರಂಡಿ ಮತ್ತು ಕೊಳಚೆ ಪ್ರದೇಶಗಳಲ್ಲಿ ಕ್ರಿಮಿನಾಶಕ ಔಷಧ ಸಿಂಪಡಿಸಿ ಸಾಂಕ್ರಾಮಿಕ ರೋಗಾಣುಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭಾಧ್ಯಕ್ಷ ಸಯ್ಯದ್ ಅಬ್ದುಲ್ ಸತ್ತಾರ್ ಹೇಳಿದರು. ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆ ಮುಂಭಾಗದ ಚರಂಡಿ ಮತ್ತು ಪಾರ್ಥೆನಿಯಂ ಗಿಡಗಳಿಗೆ ಪುರಸಭೆವತಿಯಿಂದ ಹಮ್ಮಿಕೊಂಡಿದ್ದ ಕ್ರಿಮಿ ನಾಶಕ ಔಷಧ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯ ವೆಂಕಟೇಶ್, ಮುಖ್ಯಾಧಿಕಾರಿ ರೇಣುಕಾ, ಆರೋಗ್ಯಾಧಿಕಾರಿ ನವೀನ್ ಚಂದ್ರ ಇದ್ದರು.