ಹಳ್ಳಿ ಅಭಿವೃದ್ಧಿಗೆ ಒತ್ತು: ನಾಗವೇಣಿ
ಮಾಲೂರು: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾರ್ಗದರ್ಶನದಲ್ಲಿ ತಾಲೂಕಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ಕೆ ಅದ್ಯತೆ ನೀಡಲಾಗುವುದು ಎಂದು ತಾಪಂ ನೂತನ ಅಧ್ಯಕ್ಷೆ ನಾಗವೇಣಿ ಚಂದ್ರು ಹೇಳಿದರು.
ತಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷರಾಗುವ ಅವಕಾಶ ಮಾಡಿಕೊಟ್ಟ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಮಾಜಿ ಕೇಂದ್ರ ಮಂತ್ರಿ ಕೆ.ಎಚ್.ಮುನಿಯಪ್ಪ ಹಾಗೂ ಸಹ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ಮಾತನಾಡಿ, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಆಶೀರ್ವಾದದಿಂದ ತಾಪಂ ಆಡಳಿತ ಕಾಂಗ್ರೆಸ್ ಪಾಲಾಗಿದ್ದು, ಉತ್ತಮ ಜನಪರ ಆಡಳಿತ ನೀಡುವ ಮೂಲಕ ಕಾಂಗ್ರೆಸ್ ಕಡೆ ಮತದಾರರು ನೋಡುವಂತೆ ಮಾಡಲಾಗುವುದು ಎಂದರು.
ಅಂಜನಿ ಸೋಮಣ್ಣ, ಮಧುಸೂಧನ್, ರಾಜಗೋಪಾಲ್ ರೆಡ್ಡಿ, ಪಾಪರೆಡ್ಡಿ, ಪ್ರವೀಣ್ ಕುಮಾರ್, ರವೀಂದ್ರ ರೆಡ್ಡಿ, ಸಂಪತ್ ಕುಮಾರ್, ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಚಂದ್ರಪ್ಪ, ಅಮರಾವತಿ, ಪಾರ್ವತಮ್ಮ, ಕೃಷ್ಣಪ್ಪ ಇದ್ದರು.