ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಸ್ಪೃಶ್ಯತೆ ಆಚರಣೆ ಕುರಿತ ವಿಚಾರ ಸಂಕಿರಣ ಇಂದು

Rashmi Kasaragodu
Updated On : 6 Jul 2014, 1:11 am

ಕೋಲಾರ: ಪ್ರಗತಿಪರ ಚಿಂತಕರ ಚಾವಡಿಯಿಂದ ಜು.5ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ನಚಿಕೇತ ನಿಲಯದಲ್ಲಿ ಹಿಂದೂ ಸಮಾಜದಲ್ಲಿನ ಅಸ್ಪೃಶ್ಯ ಆಚರಣೆಗಳು ಕುರಿತು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಟಿ.ವಿಜಯಕುಮಾರ್ ವಹಿಸುವರು. ಡಾ.ಜಿ.ಶಿವಪ್ಪ ಅರಿವು ಅವರ 21ನೇ ಶತಮಾನದ ಹಿಂದೂ ಸಮಾಜದಲ್ಲಿನ ಅಸ್ಪೃಶ್ಯ ಆಚರಣೆಗಳು ಕುರಿತ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಬಿಡುಗಡೆಗೊಳಿಸುವರು. ಡಾ. ಜಿ.ಶಿವಪ್ಪ ಅರಿವು- ಅಸ್ಪೃಶ್ಯ ಆಚರಣೆಗಳ ಚರಿತ್ರೆ-ಒಂದು ಅವಲೋಕನ ಜಿ.ಹನುಮಪ್ಪ-ಅಸ್ಪೃಶ್ಯತೆ ನಿವಾರಣೆ ಮತ್ತು ಸಂವಿಧಾನ ಗೋಷ್ಠಿಗಳು ನಡೆಯಲಿವೆ. ಮುಖ್ಯ ಅತಿಥಿಗಳಾಗಿ ಬಂಗವಾದಿ ನಾರಾಯಣಪ್ಪ, ವಿ.ನಾರಾಯಣಸ್ವಾಮಿ, ಪಂಡಿತ್ ಮುನಿವೆಂಕಟಪ್ಪ, ಕೃಷ್ಣಯ್ಯ ಬೌದ್ಧ್, ಎಸ್.ಪ್ರಭಾವತಿ, ಎಚ್.ಶಾಂತಮ್ಮ, ಹೂಹಳ್ಳಿ ನಾಗರಾಜ್ ವಹಿಸುವರು. ಕಾರ್ಯಾಗಾರದಲ್ಲಿ ಈ ನೆಲ ಈ ಜಲ ವೆಂಕಟಾಚಲಪತಿ ಮತ್ತು ತಂಡದಿಂದ ಕ್ರಾಂತಿಗೀತೆಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement