ಎಲ್ಲಾ ಗೊತ್ತಿರುವವನು ಮಂತ್ರಿ ಆಗಬೇಕೆಂಬ ಮಾನದಂಡವೇನಿಲ್ಲ
ಕೋಲಾರ: ಮಂತ್ರಿ ಆದವರಿಗೆ ಎಲ್ಲವೂ ಗೊತ್ತಿರಬೇಕು, ಎಲ್ಲಾ ಗೊತ್ತಿರುವವನು ಮಂತ್ರಿ ಆಗಬೇಕೆಂಬ ಮಾನದಂಡವೇನಿಲ್ಲ... ಹೀಗೆಂದು ವ್ಯಾಖ್ಯಾನ ಮಾಡಿದವರು ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್ ಕುಮಾರ್. ವಿಧಾನಸಭೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಸ್ವಾಮಿ ಎಂದೇ ಖ್ಯಾತರಾಗಿರುವ ರಮೇಶ್ ಕುಮಾರ್, ಶನಿವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಎತ್ತಿನ ಹೊಳೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟ ಮಾಹಿತಿ ಇದ್ದಂತಿಲ್ಲ. ತಮ್ಮ ಭರವಸೆ, ಯೋಜನೆಯ ಕುರಿತ ಸಮರ್ಥನೆಗೂ ವ್ಯತ್ಯಾಸವಿದೆ ಎಂದಾಗ, ಮಂತ್ರಿ ಆದವರಿಗೆ ಎಲ್ಲಾ ಗೊತ್ತಿರಬೇಕೆಂಬ ನಿಯಮವೇನಾದರೂ ಇದೆಯೇ? ಹಾಗೆಯೇ ಎಲ್ಲ ಗೊತ್ತಿರುವವನು ಮಂತ್ರಿ ಆಗಬೇಕೆಂಬ ಮಾನದಂಡವಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಏನೂ ತಿಳಿಯದವರನ್ನು ಜನರ ಮೇಲೆ ಸವಾರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿದೆಯಲ್ಲ ಎಂಬ ಪ್ರಶ್ನೆಗೆ ನಾನು ಏನೇ ಹೇಳಿದರೂ ಅದು ವಿವಾದವಾಗುತ್ತದೆ ಎಂದರು.
ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಶಿಡ್ಲಘಟ್ಟ: 2014-15 ನೇ ಸಾಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ನಿರುದ್ಯೋಗ ಯುವಕ, ಯುವತಿಯರಿಗೆ ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್ ಸಿಎಚಿಟಿ ಕಂಪ್ಯೂಟರ್ ಎಜುಕೇಷನ್ ಅಂಡ್ ರೂರಲ್ ಡವಲಪ್ಮೆಂಟ್ ಶಿಡ್ಲಘಟ್ಟ ಇದರ ಆಶ್ರಯದಲ್ಲಿ ವಿವಿಧ ಕೋರ್ಸ್ಗಳಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅಜರ್ ಸಲ್ಲಿಸಲು ವಯೋವುತಿ 18-35 ವರ್ಷ. ಜು. 10ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಗಳಿಗಾಗಿ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ.ಟಿ.ರಮೇಶ್, ದೂರವಾಣಿ 08158-315946, ಮೋ- 9880943159 ಇಲ್ಲಿ ಸಂಪರ್ಕಿಸಿ.