ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಐಸಿಡಿಎಸ್ ಖಾಸಗೀಕರಣ ಪಾಲುದಾರಿಕೆಗೆ ವಿರೋಧ

Rashmi Kasaragodu
Updated On : 6 Jul 2014, 1:10 am

ಮಾಲೂರು: ಐಸಿಡಿಎಸ್ ಯೋಜನೆಯ ಸರ್ಕಾರಿ-ಖಾಸಗಿ ಪಾಲುದಾರಿಕೆ (ಪಿಪಿಪಿ)ಯ ಹೆಸರಿನಲ್ಲಿ ಖಾಸಗೀಕರಣವನ್ನು ವಿರೋಧಿಸಿ, ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಿದ ಘಟನೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷೆ ಮೀನಾಕ್ಷಮ್ಮ, ದೇಶದ ಮಹತ್ವಪೂರ್ಣ ಸಂಪನ್ಮೂಲ ವಾಗಿರುವ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿರುವ ಐಸಿಡಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ದೇಶದಲ್ಲಿ ಅನುಷ್ಠಾಗೊಳಿಸಲಾಗಿದೆ. 12ನೇ ಪಂಚವಾರ್ಷಿಕ ಯೋಜನೆಯಡಿ ಕೇಳಿದ ರು 3 ಲಕ್ಷ ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರವು ರು 1.83ಲಕ್ಷ ಕೋಟಿ ಮಾತ್ರ ನೀಡಿ ಯೋಜನೆಯ ಕತ್ತು ಹಿಸುಕುವ ಪ್ರಯತ್ನ ಮಾಡಲಾಗುತ್ತಿದೆ. ಈ ಹೇಳಿಕೆ ನೀಡುವ ಮೂಲಕ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದೆ ಎಂದು ಅಪಾದಿಸಿದರು. ಎರಡು ಗಂಟೆ ನಡೆಸಿದ ಧರಣಿ ನಂತರ ಅಂಗನವಾಡಿ ಕಾರ್ಯಕರ್ತೆಯರು ತಹಸೀಲ್ದಾರ್ರಿಗೆ ಮನವಿ  ಪತ್ರ ಅರ್ಪಿಸಿದರು. ಕಾರ್ಯದರ್ಶಿ ಬಿ.ಎಸ್. ನಾಗರತ್ನ, ಸಂಪಂಗಿ, ಪುಪ್ಬಾವತಮ್ಮ, ಲಕ್ಷಮ್ಮ, ವಿಜಯಕುಮಾರಿ, ಲೋಕೇಶ್, ವೈ.ಕೆ.ಎಂ. ಲತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement