ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೋಬಿಘಾಟ್ ಭೂಮಿ ರಕ್ಷಿಸಲು ಮನವಿ

Rashmi Kasaragodu
Updated On : 6 Jul 2014, 1:10 am

ಮುಳಬಾಗಲು: ಪಟ್ಟಣದ ಮುತ್ಯಾಲಪೇಟೆಯ ದೋಬಿಘಾಟ್ ಸಮೀಪದ ಜಮೀನು ದುರ್ಬಳಕೆ ಮಾಡಿಕೊಂಡಿರುವ ಚಂದ್ರಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದಲಿತ ಸಂಘಟನೆಗಳ ಸಂಯುಕ್ತರಂಗದ ಮುಖಂಡರು ಶನಿವಾರ ತಾಲೂಕು ಕಚೇರಿಯಲ್ಲಿ  ಉಪತಹಶೀಲ್ದಾರ್ ಕೊಂಡಪ್ಪರವರಿಗೆ ಮನವಿ ಪತ್ರಸಲ್ಲಿಸಿದರು. 30ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ತಂಗರಾಜ್ ಅವರು ಹರಿಜನರ ಅಭಿವೃದ್ದಿಗಾಗಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪಟ್ಟಣದ ಸರ್ವೇ ನಂಬರ್ 741ರಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಿದ್ದರು. ಕರ್ನಾಟಕ ದಲಿತ ಕ್ರಿಯಾ ಸಮಿತಿ ಹೆಸರಿನಲ್ಲಿ ಜಮೀನು ಇರುವುದರಿಂದ ಕೆಇಬಿ ಚಂದ್ರಶೇಖರ್ ಅವರು ಜಾಗವನ್ನು ನಿವೇಶನಗಳಾಗಿ ವಿಂಗಡಿ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಸಂಯುಕ್ತ ರಂಗದ ಗೌರವಾಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್ ಮತ್ತು ಅಧ್ಯಕ್ಷ ಮೆಕಾನಿಕ್ ಶ್ರೀನಿವಾಸ್ ಆರೋಪಿಸಿದರು. ಸಹಗೌರವಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ಕಾರ್ ಶ್ರೀನಿನಾಸ್, ಕಗ್ಗಿನಹಳ್ಳಿ ಶ್ರೀನಿವಾಸ್, ಮತ್ತು ಸಂಘಟನಾ ಕಾರ್ಯದರ್ಶಿ ಬೈರಕೂರು ರಾಮಾಂಜೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement