ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಕರವೇ ಪ್ರತಿಭಟನೆ

Rashmi Kasaragodu
Updated On : 6 Jul 2014, 1:10 am

ಮಾಲೂರು: ಕೇಂದ್ರ ಸರ್ಕಾರವು ಸಿಮೇಎಣ್ಣೆ, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಲು ಹೊರಟಿರುವುದನ್ನು ಖಂಡಿಸಿ ಸ್ಥಳೀಯ ಕರವೇ ಕಾರ್ಯಕರ್ತರ ಶ್ರೀಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದ ಘಟನೆ ಶನಿವಾರ ನಡೆದಿದೆ. ತಾಲೂಕಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಜನರ ಭಾರಿ ನಿರೀಕ್ಷೆ-ಆಸೆ ಇಟ್ಟುಕೊಂಡಿದ್ದ ಮೋದಿ ಸರ್ಕಾರವು ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಹೆಚ್ಚಿಸಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೊಗಿದ ನಂತರ ಮೆರವಣಿಗೆಯಲ್ಲಿ ಮಿನಿವಿಧಾನ ಸೌಧಕ್ಕೆ ತೆರಳಿದ ಪ್ರತಿಭಟನೆಕಾರರು ತಹಸೀಲ್ದಾರ್ರಿಗೆ ಮನವಿ ಪತ್ರ ಅರ್ಪಿಸಿದರು. ತಾಲೂಕು ಉಪಾಧ್ಯಕ್ಷ ನಾಣಿ, ಗೌರವಾಧ್ಯಕ್ಷ ಕಲಾವಿದ ಸ್ವಾಮಿ, ಬ.ಶ್ರೀನಿವಾಸ್, ಪುರಸಭೆ ಸದಸ್ಯ ಮುರಳೀಧರ್, ದಯಾನಂದ್, ಕೆ. ರಮೇಶ್, ಹುಲಿಧೇನು ಮಂಜು, ಕಡತೂರು ಮಂಜು, ಮಂಜು ಸಾರಥಿ, ಆಟೋ ರಾಮಾಂಜಿ, ಹರೀಶ್, ಮುನಿರಾಜು, ಅಸ್ಲಂ, ವೇಣು, ವೆಂಕಟೇಶ್, ರಮೇಶ್, ಸಿ.ಡಿ. ನಾಗರಾಜ್, ಮಧು, ಆಟೋ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement