ರೇಲ್ವೆ ಕಾಂಪೌಂಡ್ ಕೆಡವಿದ ಪ್ರಭಾವಿಗಳು!
ಶಿಡ್ಲಘಟ್ಟ: ಪಟ್ಟಣದ ರೇಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಕಾಂಪೌಂಡ್ನ್ನು ಕೆಲವು ಮಂದಿ ಪ್ರಭಾವಿ ವ್ಯಕ್ತಿಗಳ ಕಡೆಯವರು ಜೆ.ಸಿ.ಬಿ ಮುಖಾಂತರ ಕೆಡವಿ, ಕಲ್ಲುಗಳನ್ನು ಸಾಗಾಣೆ ಮಾಡುತ್ತಿದ್ದರೂ ಕೂಡಾ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಪೌಂಡಿನ ಪಕ್ಕದಲ್ಲೆ ಕಾಂಗ್ರೆಸ್ ಭವನ ನಿಮರಾಣವಾಗಿದ್ದು, ಭವನದ ಬಾಗಿಲಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಗೋಡೆಯನ್ನು ಕೆಡವಿ ಕಲ್ಲುಗಳನ್ನು ಸಾಗಾಣೆ ಮಾಡಿದ್ದಾರೆ. ಸಾರ್ವಜನಿಕರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸುವವರೆಗೂ ಇಲಾಖೆಯವರು ಜಾಣ ಮೌನಕ್ಕೆ ಮೊರೆ ಹೋಗಿದ್ದರು. ದೂರವಾಣಿಯ ಮುಖಾಂತರ ಕೇಳಿದಾಗ, ಗೋಡೆಯನ್ನು ಕೆಡವದಂತೆ ತಡೆದು ಟ್ರಾಕ್ಟರ್ಗೆ ತುಂಬಿದ್ದ ಕಲ್ಲುಗಳನ್ನು ನಿಲ್ದಾಣದ ಪಕ್ಕದಲ್ಲಿ ಇಳಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.