ಕೇಂದ್ರದ ವಿರುದ್ಧ ಜಾಥಾ
ಕೋಲಾರ: ಮೋದಿಯ ಮೋಡಿಗೆ ಒಳಗಾದ ಜನರು ಈಗ ತಮ್ಮ ಮೇಲೆ ತಾವೇ ಮಂಕು ಬೂದಿ ಎರಚಿಕೊಂಡಂತಾಗಿದೆ ಎಂದು ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ವರಲಕ್ಷ್ಮಿ ಹೇಳಿದರು. ನಗರದ ಕೋರ್ಟ್ ವೃತ್ತದಲ್ಲಿ ಭಾನುವಾರ ಸಿಐಟಿಯು ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ಹಕ್ಕುಗಳ ಜಾಗೃತಿ ಜಾಥಾದಲ್ಲಿ ಮಾತನಾಡಿ, ಯುಪಿಎ ಸರ್ಕಾರವಿದ್ದಾಗ ಅನುಸರಿಸಿದ ಜನ ವಿರೋಧಿ ನೀತಿಯನ್ನು ಮೋದಿ ಸರ್ಕಾರ ಮುಂದುವರೆಸುತ್ತಿದೆ ಎಂದು ಆರೋಪಿಸಿದರು. ಸಿಐಟಿಯು ತಾಲೂಕು ಅಧ್ಯಕ್ಷ ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.