ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Rashmi Kasaragodu
Updated On : 7 Jul 2014, 2:02 am

ಬಾಗೇಪಲ್ಲಿ 18, ಮಾಲೂರು 26ಕ್ಕೆ


ಸಮ್ಮೇಳನ ಅರ್ಥರ್ಪೂವಾಗಲಿ
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನಲ್ಲಿ ಡಾ.ಆರ್. ಶೇಷಶಾಸ್ತ್ರಿರವರ ಅಧ್ಯಕ್ಷತೆಯಲ್ಲಿ ಜು.18 ರಿಂದ ನಡೆಯಲಿರುವ ಎರಡು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿರುವ ಡಾ.ಆರ್ . ಶೇಷಶಾಸ್ತ್ರಿರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್ ನೇತೃತ್ವದ ತಂಡ ವೀಳ್ಯ ನೀಡಿ ಆಹ್ವಾನಿಸಿತು.
 ವೀಳ್ಯ ಸ್ವೀಕರಿಸಿ ಮಾತನಾಡಿದ ಡಾ.ಆರ್. ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು ನನ್ನ ಸೇವೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಎಲ್ಲಾ ವರ್ಗದ ಸಾಹಿತ್ಯ ಪ್ರಿಯರೂ ಈ ಸಮ್ಮೇಳನದಲ್ಲಿ ಭಾಗವಹಿಸಿ ತಾಲೂಕಿನ  ಸಾಹಿತ್ಯ ಹಬ್ಬವನ್ನು ಅರ್ಥಪೂರ್ಣವನ್ನಾಗಿ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ  ಎಸ್.ಎನ್. ಅಮೃತ್ ಕುಮಾರ್, ಖಜಾಂಚಿ ಎಸ್. ವಾಸುದೇವಮೂರ್ತಿ, ಸಂಘಟನಾ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್, ಸಾಂಸ್ಕೃತಿಕ ಕಾರ್ಯದರ್ಶಿ ಪಾಮು.ಚಲಪತಿಗೌಡ, ತಾಲ್ಲೂಕು ಕಾರ್ಯದರ್ಶಿ ಎಂ.ಕೃಷ್ಣಪ್ಪ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಬಿ.ಆರ್. ಕೃಷ್ಣ, ಕಾರ್ಯದರ್ಶಿ ಮಣಿಕಂಠ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್, ಸಂಜೀವರತ್ನಶಾಸ್ತ್ರಿ, ಎನ್. ಸುಂದರನ್, ಬಿಳ್ಳೂರು ಅಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಬಿ.ಎಸ್.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸತ್ಯಂ ಸಮ್ಮೇಳನಾಧ್ಯಕ್ಷ
ಮಾಲೂರು: ಮಾಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನವನ್ನು ಚಿಕ್ಕ ತಿರುಪತಿಯಲ್ಲಿ ಜು. 26 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದರು.   ಅವರು ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸ್ಥಳೀಯ ಸಾಹಿತಿ ವೆಂಕಟಾಪು ಸತ್ಯಂ ರವರನ್ನು ಆರಿಸಲಾಗಿದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ವತಿಯಿಂದ ಅಧಿಕಾರಿಗಳ ಪೂರ್ವ ಭಾವಿ ಸಭೆಯನ್ನು ಕರೆದು ಅಧಿಕಾರಿಗಳ ಸಹಕಾರ ಕೋರಲು ನಿರ್ಧರಿಸಲಾಗಿದೆ ಎಂದರು.  ಕಸಾಪ ಗೌರವಾಧ್ಯಕ್ಷ ಅಶ್ವಥ್ ರೆಡ್ಡಿ ಮಾತನಾಡಿ,ದರು.
500 ಪ್ರತಿನಿಧಿಗಳು: ತಾಲೂಕು ಅಧ್ಯಕ್ಷ ಮಾ.ಗೋ ಮಧುಸೂಧನ್ ಮಾತನಾಡಿ, ಸಮ್ಮೇಳನದಲ್ಲಿ ತಾಲೂಕಿನ ಕನ್ನಡ ಪರ ಸಂಘಸಂಸ್ಥೆಗಳು, ಸಾಹಿತಿಗಳು, ಜನಪ್ರತಿನಿಧಿಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, 500 ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲಾಗುವುದು ಎಂದರು.
 ಕಸಾಪ ಜಿಲ್ಲಾ ಪ್ರತಿನಿಧಿ ಎಸ್.ನಾರಾಯಣಸ್ವಾಮಿ, ತಾಲೂಕು ಸಮಿತಿಯ ಗುರುಮೂರ್ತಿ, ಬಿ.ವಿ.ಸೋಮಶೇಖರ್, ಪಿ.ಶಶಿಧರ್, ಕುಂತೂರು ಚಂದ್ರಪ್ಪ, ಲಕ್ಕೂರು ಹೋಬಳಿ ಘಟದ ಅಧ್ಯಕ್ಷ ಎನ್.ವೆಂಕಟಪತಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement