ಬೆಂಗಳೂರಿನಲ್ಲಿ ಉದ್ಯೋಗ ಮೇಳ ಇಂದು
ಕೆಜಿಎಫ್: ಎಸಿಸಿಪಿಎಲ್ ಕಂಪನಿ ನೇತೃತ್ವದಲ್ಲಿ ಜು. 7ರಂದು ಸೋಮವಾರ ಬೆಳಗ್ಗೆ 11.30ರಿಂದ ಸಂಜೆ 4.30ರ ವರೆಗೆ ಕೌಶಲ್ಯ ವತಿಯಿಂದ ಬೆಂಗಳೂರಿನ ರೆಹಮತ್ ನಗರದಲ್ಲಿರುವ ಇಕ್ರಾ ಸ್ಕೂಲ್ನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.
ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಸಿದ್ಧ ಕಂಪನಿಗಳು ಭಾಗವಹಿಸಲಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತ್ತು ಈಗಾಗಲೇ ತರಬೇತಿ ಪಡೆದ ಅರ್ಹ ಫವಾನುಭವಿಗಳು, ಆಸಕ್ತ ವಿದ್ಯಾರ್ಥಿಗಳು, ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಎಸಿಸಿಪಿಎಲ್ ಕಂಪನಿ ಪ್ರಕಟಣೆಯಲ್ಲಿ ಕೋರಿದೆ.