ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ವಿಸ್ತರಣೆಗೆ ಆಗ್ರಹ

Rashmi Kasaragodu
Updated On : 7 Jul 2014, 2:00 am

ಶ್ರೀನಿವಾಸಪುರ ಪುರಸಭೆಯ ಒಂದನೇ ವಾರ್ಡ್ನ ಮಾರುತಿ ನಗರದಲ್ಲಿ ಕಿರಿದಾದ ರಸ್ತೆಯಿಂದ ಸಾರ್ವಜನಿಕ ಓಡಾಟಕ್ಕೆ ತುಂಬಾ ಅನಾನುಕೂಲವಾಗಿದೆ. ಇತ್ತೀಚಿಗೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದು ಒಂದೆರಡು ರಸ್ತೆಗಳು ಬಿಟ್ಟರೆ ಉಳಿದೆಲ್ಲ ರಸ್ತೆಗಳೂ ಮೂರು ಮತ್ತು ನಾಲ್ಕು ಅಡಿಗಳು ವಿಸ್ತೀರ್ಣ ಹೊಂದಿವೆ. ಇದರಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ವಿದ್ಯುತ್ ಕಂಬಗಳ ಸಮಸ್ಯೆ ಒಂದಾದರೆ ಒಳ ಚರಂಡಿಯ ಮ್ಯಾನ್ಹೋಲ್ಗಳು ಸಹಾ ರಸ್ತೆಗೆ ಸಮತಟ್ಟಾಗಿ ಇಲ್ಲವಾದ್ದರಿಂದ ರಸ್ತೆ ಇನ್ನಷ್ಟು ಕಿರಿಗಾದಿದೆ ಇದರಿಂದಾಗಿ ಅಲ್ಲಿನ ನಿವಾಸಿಗಳು  ಓಡಾಡುವುದಕ್ಕೆ ಹಾಗೂ ವಾಹನ ಸಂಚಾರಕ್ಕೂ ಸಮಸ್ಯೆ ಆಗಿದೆ. ಮೂಲಭೂತ ಸೌಕರ್ಯಗಳನ್ನು ನೀಡುತ್ತಿರುವ ಪುರಸಭೆ ಆಗಲಿ ಅಥವಾ ಕಂದಾಯ ಪಡೆಯುತ್ತಿರುವ ಪಂಚಾಯತಿ ಟಿ. ತಿಮ್ಮಸಂಗ್ರ ಗ್ರಾಪಂ ಆಗಲಿ ಮಾರುತಿ ನಗರದಲ್ಲಿ  ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಇನ್ನಾದರೂ ಜನತೆಯ ಸಮಸ್ಯೆ ಅರಿತು ಮೂಲ ಸೌಕರ್ಯ ಕಲ್ಪಿಸಬೇಕು.
ಟಿ ಉಪೇಂದ್ರ, ಶ್ರೀನಿವಾಸಪುರ
ಚರಂಡಿ ಸ್ವಚ್ಛಗೊಳಿಸಿ
ಕೋಲಾರದ ಅಂತರಗಂಗೆ ರಸ್ತೆಯಲ್ಲಿನ ಕುವೆಂಪು ಉದ್ಯಾನವನ ಸಮೀಪದ ದೊಡ್ಡ ಚರಂಡಿಯಲ್ಲಿ ಕಳೆದ 3-4 ದಿನಗಳ ಹಿಂದೆ ಎಸೆಯಲಾಗಿರುವ ಬಳಕೆ ಮಾಡಿರುವ ಎಲೆಯಿಂದ ಮಾಡಿರುವ ತಟ್ಟೆಗಳನ್ನು ತೆರವುಗೊಳಿಸಲಾಗಿಲ್ಲ. ಕಸ ಮುಕ್ತ ಕೋಲಾರ ಮಾಡಲು ಹೊರಟಿರುವ ನಗರಸಭೆಯವರು ಕೂಡಲೇ ಚರಂಡಿಯಲ್ಲಿ ಎಸೆಯಲಾಗಿರುವ ತಟ್ಟೆಗಳನ್ನು ತೆಗೆಸಿ ಚರಂಡಿ ಸ್ವಚ್ಛಗೊಳಿಸದಿದ್ದರೆ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಜೊತೆಗೆ ಚರಂಡಿಯಲ್ಲಿ ಕಸ ಎಸೆದಿರುವವರಿಗೆ ಸೂಕ್ತ ತಂಡ ವಿಧಿಸುವ ಮೂಲಕ ನಗರದ ಬೇರೆ ಎಲ್ಲೂ ಈ ರೀತಿ ಚರಂಡಿಗಳನ್ನು ತಿಪ್ಪೆಗುಂಡಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು.
ಟಿ ರಾಕೇಶ್,ಕೋಲಾರ
ಬಡಾವಣೆ ಪ್ರಗತಿ ಯಾವಾಗ?
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಟಮಕದಲ್ಲಿ ರಚಿಸಿರುವ ಬಡಾವಣೆ ಅಭಿವೃದ್ಧಿಪಡಿಸಲು ಸಾಕಷ್ಟು ವರ್ಷಗಳಾದರೂ ಕೈಗೂಡಿಲ್ಲ. ಅನೇಕರು ನಿವೇಶನ ಖರೀದಿ ಮಾಡಿ ಮನೆಗಳನ್ನು ಕಟ್ಟಿಲ್ಲ. ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಬಡಾವಣೆಯನ್ನು ಖಾಲಿ ಬಿಡಲಾಗಿದೆ.  ಇದರಿಂದ ಬಡಾವಣೆಯಲ್ಲಿ ಗಿಡ ಗಂಟೆಗಳು ಬೆಳೆದಿವೆ. ಸಿಎ ಸೈಟುಗಳು ಎಲ್ಲಿವೆ ಎಂಬುದು ತಿಳಿಯದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಟಕಮದಲ್ಲಿನ ಕುಡಾಕ್ಕೆ ಸೇರಿದ ಬಡಾವಣೆಯನ್ನು ಅಭಿವೃದ್ಧಿಪಡಿಸಬೇಕು, ಹತ್ತಾರು ವರ್ಷಗಳಿಂದ ಕಟ್ಟಡ ಕಟ್ಟದೆ ಖಾಲಿ ಬಿಟ್ಟಿರುವ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು.
ಟಿ ತ್ಯಾಗರಾಜ್, ಕೋಲಾರ
ಬೀದಿ ನಾಯಿ ಕಾಟ ತಪ್ಪಿಸಿ
ಮಾಲೂರು ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಗಳನ್ನು ಪುರಸಭೆ ತಡೆಯಬೇಕಾಗಿದೆ. ಅದರಲ್ಲೂ ಮಟನ್ ಮಾರ್ಕೆಟ್ ರಸ್ತೆ ಪಕ್ಕದಲ್ಲಿರುವ ನೆಹರೂ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಬಾಲಕಿಯರ ಹಾಸ್ಟೆಲ್, ಶಾಲೆಗಳ ಪ್ರದೇಶವುಳ್ಳ ನೆಹರೂ ಬಡಾವಣೆಯಲ್ಲಿ ನಿತ್ಯ ಮಾಂಸದ ರುಚಿ ನೋಡುತ್ತಿರುವ(ಪಕ್ಕದ ರಸ್ತೆಯಲ್ಲಿ ಮಟನ್ ಮಾರ್ಕೆಟ್ ಇದೆ) ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಜನತೆ ಒಡಾಡಬೇಕಾಗಿದೆ. ಶಾಲಾ ಮಕ್ಕಳು ಸೇರಿದಂತೆ ಹಿರಿಯ ನಾಗರಿಕರಿಗೆ ಹೆಚ್ಚಿನ ಅನಾಹುತವಾಗುವ ಮೊದಲೇ ಪುರಸಭೆ ಕಾರ್ಯಚರಣೆ ನಡೆಸಿ ಬೀದಿ ನಾಯಿಯ ಹಾವಳಿಯನ್ನು ತಪ್ಪಿಸಬೇಕು.
ಟಿ ಶೇಷಾದ್ರಿ, ನೆಹರೂ ಬಡಾವಣೆ, ಮಾಲೂರು  



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement