ವಿಮೋಚನಾ ಚಳವಳಿ ಜಿಲ್ಲಾಧ್ಯಕ್ಷ ವಿರುದ್ಧ ಡಿಸಿಗೆ ದೂರು
ಕೋಲಾರ: ಕೇಳಿದಷ್ಟು ಹಣ ನೀಡಿಲ್ಲವೆಂಬ ಕಾರಣಕ್ಕೆ ಮದ್ಯದಂಗಡಿಗಳ ಹಾಗೂ ಇತರೆ ವ್ಯಾಪಾರಸ್ಥರ ಮೇಲೆ ಪ್ರಜಾ ವಿಮೋಚನಾ ಚಳವಳಿ ಜಿಲ್ಲಾಧ್ಯಕ್ಷ ಎ.ಕೃಷ್ಣಪ್ಪ ದೂರು ನೀಡಿದ್ದಾರೆ ಎಂದು ನಗರದ ಬಂಗಾರಪೇಟೆ ವೃತ್ತದ ಮದ್ಯದಂಗಡಿಗಳ ಮಾಲೀಕರು ಮತ್ತು ಇತರೆ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಪ್ರತಿ ದೂರು ಸಲ್ಲಿಸಿದ್ದಾರೆ. ಬಂಗಾರಪೇಟೆ ವೃತ್ತದ ಮದ್ಯದಂಗಡಿಗಳ ಮಾಲೀಕರು, ಇತರೆ ವ್ಯಾಪಾರಿಗಳ ಬಳಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ವಾರ್ಷಿಕೋತ್ಸವ ಹೆಸರಿನಲ್ಲಿ ಹಣ ವಸೂಲಿಗೆ ಪಿವಿಸಿ ಕೃಷ್ಣಪ್ಪ ಬಂದಿದ್ದರು. ಕೇಳಿದಷ್ಟು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದು. ಸುಮಾರು 20 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿದ್ದೇವೆ. ಕೃಷ್ಣಪ್ಪನವರು ನೀಡಿರುವ ದುರುದ್ದೇಶಪೂರಿತ ದೂರಿಗೆ ಮಾನ್ಯತೆ ನೀಡಬಾರದೆಂದು ಮನವಿ ಮಾಡಿದ್ದಾರೆ. ನಗರಸಭೆ ಸದಸ್ಯ ಮುನೇಶ್, ಮಂಜುನಾಥ್ ಮತ್ತು ವ್ಯಾಪಾರಸ್ಥ ವೆಂಕಟಾಚಲಪತಿ, ಗಿರೀಶ್, ಸೋಮಶೇಖರ್, ಹರೀಶ್, ಪ್ರಕಾಶ್ ಇತರರಿದ್ದರು.