ವ್ಯೆದ್ಯಕೀಯ ಚಿಕಿತ್ಸೆ: ನೆರವು ನೀಡಿ
ಗುಡಿಬಂಡೆ: ಅರವಿಂದ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯರ್ರಲಕ್ಕೇನಹಳ್ಳಿಯ ನರಸಿಂಹಪ್ಪರ ಪುತ್ರ ನವೀನ್ ನೇರಳೆ ಮರದಲ್ಲಿ ಹಣ್ಣು ಕೀಳಲು ಹೋಗಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಿದೆ.
ಈತ ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖನಾಗಲು ಶಸ್ತ್ರಚಿಕಿತ್ಸೆ ಅವಶ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈತನ ಪೋಷಕರಿಗೆ ವ್ಯೆದ್ಯಕೀಯ ವೆಚ್ಚ ಭರಿಸಲು ಕಷ್ಟವಾಗಿದೆ. ಮಾನವೀಯ ದೃಷ್ಟಿಯಿಂದ ದಾನಿಗಳು ವಿದ್ಯಾರ್ಥಿಯ ನೆರವಿಗೆ ಬರಬೇಕೆಂದು ನರಸಿಂಹಪ್ಪ ಕೋರಿದ್ದಾರೆ. ನೆರವು ನೀಡಲಿಚ್ಚಿಸುವವರು ಬೀಚಗಾನಹಳ್ಳಿ ಕೆನರಾಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ-8892ಗೆ ಹಣ ಜಮಾ ಮಾಡಬಹುದಾಗಿದೆ. ಮಾಹಿತಿಗೆ ನರಸಿಂಹಪ್ಪರ ಮೊ-8861973895 ಸಂಪರ್ಕಿಸಬಹುದು.