ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಹಕಾರ ಸಂಘಗಳ ಸೇವೆ ಅನನ್ಯ: ಎನ್.ಎಚ್.ಶಿವಶಂಕರರೆಡ್ಡಿ

Rashmi Kasaragodu
Updated On : 7 Jul 2014, 2:02 am

ಗೌರಿಬಿದನೂರು: ಗ್ರಾಮೀಣರೈತರಿಗೆ ಬಡ್ಡಿ ರಹಿತ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುತ್ತಿರುವ ವ್ಯವಸಾಯ ಸೇವಾ ಸಹಕಾರ ಸಂಘ ಸೇವೆ ಸ್ವಾಗತಾರ್ಹ ಎಂದು ಉಪಾಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯ ಪಟ್ಟರು. ತಾಲೂಕಿನ ರಮಾಪುರದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಕೆಸಿಸಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹವಾಮಾನ ತಜ್ಞರು ಮುಂಗಾರು ಮಳೆ ಹಿನ್ನಡೆಯಾಗಿದ್ದು ಈ ವರ್ಷ ಮಳೆಯಿಲ್ಲದೆ ಬೆಳೆ ಕುಂಠಿತವಾಗುತ್ತದೆ ಎಂದು ಈಗಾಗಲೇ ಸೂಚನೆ ನೀಡಿದ್ದು ಬ್ಯಾಂಕ್ ನಿಯಾಮಳಿ ಪ್ರಕಾರ ಬೆಳೆಯಿಲ್ಲದೆ ಸಾಲವಿತರಿಸುವಂತಿಲ್ಲ. ಆದರೂ ರೈತರ ಹಿತದೃಷ್ಟಿ ಮನಗೊಂಡು ಸಹಕಾರ ಸಂಘಗಳು ಸಾಲ ವಿತರಿಸುತ್ತಿರುವುದು ಸ್ವಾಗತರ್ಹ ಎಂದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಸದಸ್ಯ ಮರಳೂರು ಹನುಮಂತರೆಡ್ಡಿ, ಎಚ್.ಎನ್.ಪ್ರಕಾಶ ರೆಡ್ಡಿ, ಗೀತಾ ಜಯಂಧರ್, ಬೊಮ್ಮಣ್ಣ, ಗೋಪಾಲ್, ರಾಮಚಂದ್ರ, ಸಿ.ಆರ್.ನರಸಿಂಹಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement