ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಳವು ಮಾಡಿದ ಒಡವೆ ಮಾರಾಟ ಅಂಗಡಿ ಮಾಲೀಕನ ವಿಚಾರಣೆ

Rashmi Kasaragodu
Updated On : 8 Jul 2014, 2:14 am

ಚಿಂತಾಮಣಿ: ಮನೆ ಕೆಲಸದಾಕೆ ಮಾಲೀಕನ ಮನೆಯಲ್ಲಿ ಬಂಗಾರದ ಒಡವೆಗಳನ್ನು ಕದ್ದು ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ನಗರದ ಆಜಾದ್ ಚೌಕದ ಚಿನ್ನ-ಬೆಳ್ಳಿ ಅಂಗಡಿಯಲ್ಲಿ ವಿಚಾರಣೆ ನಡೆಸಿದ ಘಟನೆ ನಡೆದಿದೆ. ನಗರದ ಸಾದಿಕ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆ ಎರಡು ದಿನಗಳ ಹಿಂದೆ ಚಿನ್ನದ ಒಡವೆಗಳನ್ನು ಕಳವು ಮಾಡಿದ ಆರೋಪದ ಮೇಲೆ ನಗರ ಠಾಣೆ ಕ್ರೈಂ ಸಬ್ಇನ್ಸ್ಪೆಕ್ಟರ್ ಬಸವರಾಜು ನಗರದ ಆಜಾದ್ ಚೌಕದ ಬಳಿಯ ಚಿನ್ನ-ಬೆಳ್ಳಿ ಅಂಗಡಿ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಒಡವೆಗಳನ್ನು ಮಾರಾಟ ಮಾಡಿರುವ ಬಗ್ಗೆ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement