ಗ್ರಾಮೀಣ ಮಕ್ಕಳಿಗೆ ಸೌಲಭ್ಯಗಳ ಕೊರತೆ: ಸೋಮಶೇಖರ್ ವಿಷಾದ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಗುಯ್ಯಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಲಿಕಾ ಸಮಾಗ್ರಿಗಳ ವಿತರಣಾ ಸಮಾರಂಭವನ್ನು ಪ್ರಭಾಸಿ ಅಸೋಸಿಯೇಷನ್ನ ಸೋಮಶೇಖರ್ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಸುದರ್ಶನ್ರೆಡ್ಡಿ, ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಉತ್ತಮ ಪ್ರತಿಭಾವಂತರು. ಆದರೆ ಗ್ರಾಮೀಣ ಪ್ರತಿಭೆಗಳಿಗೆ ಪೋತ್ಸಾಹ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ದಾನಿಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಮಾಗ್ರಿಗಳನ್ನು ಒಗಿಸುತ್ತಿದ್ದು, ಶಾಲಾ ಮಕ್ಕಳು ಸೌಲಭ್ಯದ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದಬೇಕೆಂದರು. ದಾನಿ ಸೋಮಶೇಖರ್ ಮಾತನಾಡಿ, ಗ್ರಾಮೀಣ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಕಲಿಕೆಗೆ ಸೌಲಭ್ಯಗಳ ಕೊರತೆಯಿಂದ ಹಿಂದುಳಿಯ ಬಾರದು ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಲೋಕೇಶ್, ಪ್ರತೀಶ್, ಹಳೆಹಳ್ಳಿ ಶಿವಕುಮಾರ್, ಲಕ್ಷ್ಮೀಪತಿ, ಗಂಗಾಧರಯ್ಯ, ಖಂಡೇಂದ್ರ ಇದ್ದರು.