ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಿಸರ ರಕ್ಷಣೆಗೆ ಮುಂದಾಗಿ: ನ್ಯಾ. ರವಿಕಾಂತ್

Rashmi Kasaragodu
Updated On : 8 Jul 2014, 2:16 am

ಗೌರೀಬಿದನೂರು: ಮಾನವನ ದುರಾಸೆಗೆ ಮರಗಳು ನಾಶವಾಗುತ್ತಿದ್ದು, ಪರಿಸರ ಉಳಿಸಲು ಸಾರ್ವಜನಿಕರು, ಶಾಲಾ ಮಕ್ಕಳ ಜೊತೆಗೆ ಸರ್ಕಾರಿ ಅಧಿಕಾರಿಗಳೂ ಕಡ್ಡಾಯವಾಗಿ ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕೆಂದು ಸಿವಿಲ್ ಪ್ರಧಾನ ನ್ಯಾಯಧೀಶ ಬಿ.ಕೆ. ರವಿಕಾಂತ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಿವಿಲ್ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಆಂದೋಲನದಲ್ಲಿ ಮಾತನಾಡಿ, ಬಯಲು ಸೀಮೆಯಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಸ್ಯ ಶ್ಯಾಮಲವಾಗಲು ಗಿಡಮರಗಳು ನೆಡವುದು ಅನಿವಾರ್ಯವಾಗಿದೆ. ನಿಗದಿತ ಮಳೆಯಾಗದೆ ಅಂತರ್ಜಲ ಕುಸಿದಿದ್ದು ಕುಡಿಯಲು ನೀರು ಸಿಗದ ದುಸ್ಥಿತಿ ಒದಗಿದೆ. ಈ ಸ್ಥಿತಿಯನ್ನು ಹೈಕೋರ್ಟ್ ಮನಗಂಡು ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ನೆಟ್ಟು ಮಾದರಿ ಆಗಬೇಕೆಂದು ಆದೇಶ ಹೊರಡಿಸಿದ್ದು ಎಲ್ಲ ಕಚೇರಿ ಆವರಣದ ಮುಂಭಾಗದಲ್ಲಿ ಕಡ್ಡಾಯವಾಗಿ ಗಿಡ ಮರಗಳನ್ನು ಬೆಳಸಿ ಪೋಷಿಸುವ ಕರ್ತವ್ಯ ಆಯಾ ಕಚೇರಿಗೆ ಸೀಮಿತವಾಗಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಅರಣ್ಯಾಧಿಕಾರಿ ರೆಹಮತ್ ಉಲ್ಲಾ, ವಕೀಲ ಮುನಿಶ್ಯಾಮ ರೆಡ್ಡಿ, ಎಚ್.ಎಲ್. ವೆಂಕಟೇಶ್, ಗಂಗಣ್ಣ, ಮೂಕಾಂಬಿಕಾ, ವೇಣುಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement