ಪ್ರಿಯಕರನ ಜತೆ ವಿವಾಹಿತ ಯುವತಿ ಪರಾರಿ
ಚಿಂತಾಮಣಿ: ವಿವಾಹಿತ ಯುವತಿ ರಾತ್ರೋ ರಾತ್ರಿ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂದಿಗಾನಹಳ್ಳಿಯ ದ್ರಾಕ್ಷಾಯಿಣಿಯನ್ನು ನಾಲ್ಕು ತಿಂಗಳ ಹಿಂದೆ ಹೊಸಕೋಟೆ ತಾಲೂಕಿನ ಯುವಕನ ಜೊತೆ ಲಗ್ನ ಮಾಡಿಕೊಡಲಾಗಿತ್ತು. ಆಷಾಡ ಮಾಸಕ್ಕಾಗಿ ತವರು ಮನೆಗೆ ಬಂದಿದ್ದ ದ್ರಾಕ್ಷಾಯಿಣಿ, ಕಳೆದ ರಾತ್ರಿ ನಗ ನಾಣ್ಯ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಅಕ್ಕಪಕ್ಕ ಹಾಗೂ ಸಮಬಂಧಿಕರ ಬಳಿ ಯುವತಿ ಬಗ್ಗೆ ವಿಚಾರಿಸಿದರೂ ಪತ್ತೆಯಾಗದ ಕಾರಣ, ನಂತರ ಮನೆಯಲ್ಲಿ ನಗ-ನಾಣ್ಯ ಇಲ್ಲದಿರುವುದನ್ನು ಕಂಡು ಅನುಮಾನದಿಂದ ಹುಡುಕಾಟ ಪ್ರಾರಂಭಿಸಿದಾಗ ಹುಡುಗಿಯು ಯುವಕನ ಜತೆ ಜೊತೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.