ಸಂಗೀತೋತ್ಸವಕ್ಕೆ ಭರದ ಸಿದ್ಧತೆ
ಚಿಂತಾಮಣಿ: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕೈವಾರ ಯೋಗಿನಾರೇಯಣ ಮಠದಲ್ಲಿ ಜುಲೈ 10 ರಿಂದ ಆರಂಭವಾಗುವ ಮೂರು ದಿನಗಳ ಗುರುಪೂಜಾ ಸಂಗೀತೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಸಮಾರಂಭ ನಡೆಯುವ ಸಭಾಂಗಣದ ಮುಂಭಾಗ ಬೃಹತ್ ಪೆಂಡಾಲ್ ಹಾಕಲಾಗುತ್ತದೆ ಮತ್ತು ಭಕ್ತಾಧಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಸಂಗೀತ ಕಚೇರಿಗಳು ನಡೆಯುವ ಸಭಾಂಗಣದಲ್ಲಿ ವೇದಿಕೆ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ.