ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಹೈನು ರೈತರ ಅಭಿವೃದ್ಧಿ ಕೋಚಿಮುಲ್ ಧ್ಯೇಯ'

Rashmi Kasaragodu
Updated On : 8 Jul 2014, 2:17 am

ಮಾಲೂರು: ಹೈನುಗಾರಿಕೆ ಹಾಗೂ ಅದನ್ನು ನಂಬಿರುವ ರೈತರ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದ್ದು, ಜಿಲ್ಲೆಯಲ್ಲೇ ಮಾಲೂರು ತಾಲೂಕನ್ನು ಹೈನುಗಾರಿಕೆಯಲ್ಲಿ ಮಾದರಿ ಮಾಡಲಾಗುವುದು ಎಂದು ಕೋಚಿಮುಲ್ ನಿರ್ದೇಶಕ ಕೆ.ವೈ. ನಂಜೇಗೌಡ ಹೇಳಿದರು.
   ಅವರು ಪಟ್ಟಣದ ಕೃಷಿಕ ಸಮಾಜದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲೂಕು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತ ನಮ್ಮ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ಹೈನುಗಾರಿಕೆಯಲ್ಲಿ ನಮ್ಮ ರೈತರು ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಹಾಲು ಉತ್ಪಾದಕರ ಏಳಿಗೆಯಲ್ಲಿ ಕೋಚಿಮುಲ್ ಭವಿಷ್ಯ ವಿರುವುದರಿಂದ ಹೈನುಗಾರಿಕೆಯಲ್ಲಿ ಬರುತ್ತಿರುವ ಹೂಸ ಆಧುನೀಕತೆಯ ತಾಂತ್ರಿಕ ಪದ್ಧತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕೋಚಿಮುಲ್ ಚಿಂತನೆ ನಡೆಸುತ್ತಿದೆ. ರೈತರು ಕೋಚಿಮುಲ್ನ ಅಭಿವೃದ್ಧಿಗಾಗಿ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದಾಗ ಅಕಾಲ ಮರಣಕ್ಕೆ ತುತ್ತಾಗಿದ್ದ ದೊಡ್ಡಕಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ವೆಂಕಟರಮಣ ರವರ ಪತ್ನಿಗೆ ಕೋಚಿಮುಲ್ ನಿರ್ದೇಶಕ ನಂಜೇಗೌಡರು 25 ಸಾವಿರ ರು.ಗಳ ಚೆಕ್ ವಿತರಿಸಿದರು. ಅಧಿಕಾರಿ ಶ್ರೀಧರ್ ಮೂರ್ತಿ, ಡಾ. ವಿಶ್ನನಾಥ್,ನಾರಾಯಣಸ್ವಮಿ, ಶಿವುಕುಮಾರ್, ಮಂಜುನಾಥ್, ಪ್ರಕಾಶ್, ವೇಣು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement