ಆರೋಗ್ಯ ಉಚಿತತಪಾಸಣೆ ನಾಳೆ
ಮಾಲೂರು: ಸ್ಥಳೀಯ ಕೆನರಾ ಬ್ಯಾಂಕ್, ಕೋಲಾರದ ಜಾಲಪ್ಪ ಆಸ್ವತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಂಬೀಪುರದಲ್ಲಿ ಜು.10ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನುರಿತ ವೈದ್ಯರು ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಬಳಿಕ ಉಚಿತ ಔಷಧಿಗಳನ್ನು ಕೊಡಲಾಗುವುದು. ಅವಶ್ಯಕತೆ ಇರುವವರನ್ನು ಆ ದಿನವೇ ಆರ್.ಎಲ್.ಜಾಲಪ್ಪ ಆಸ್ವತ್ರೆಗೆ ಕರೆದುಕೊಂಡು ಹೋಗಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಉಷಾರಾಮ್ ಕುಮಾರ್ ತಿಳಿಸಿದ್ದಾರೆ. ಜಾಲಪ್ಪ ಆಸ್ವತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಿ.ಎಸ್.ಶ್ರೀರಾಮುಲು, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಮುನಿನಾರಾಯಣ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಕೃಷ್ಣಮೂರ್ತಿ ಹಾಗೂ ಲೀಡ್ ಬ್ಯಾಂಕ್ನ ವಿಭಾಗೀಯ ವ್ಯವಸ್ಥಾಪಕ ಶಿವಶಂಕರ್ ರಾವ್ ಭಾಗವಹಿಸಲಿದ್ದಾರೆ.